BREAKING : ಅಂತ್ಯಗೊಂಡ ಕಲಾ ಬದುಕು : ಹಿರಿಯ ಕಲಾವಿದ ಈರಯ್ಯ ಹಿರೇಮಠ ನಿಧನ..!!

You are currently viewing BREAKING : ಅಂತ್ಯಗೊಂಡ ಕಲಾ ಬದುಕು : ಹಿರಿಯ ಕಲಾವಿದ ಈರಯ್ಯ ಹಿರೇಮಠ ನಿಧನ..!!

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : 

BREAKING : ಅಂತ್ಯಗೊಂಡ ಕಲಾ ಬದುಕು : ಹಿರಿಯ ಕಲಾವಿದ ಈರಯ್ಯ ಹಿರೇಮಠ ನಿಧನ..!!

ಕುಕನೂರು : ಕೊಪ್ಪಳ ಜಿಲ್ಲೆ, ಕುಕುನೂರು ತಾಲೂಕಿನ ಮಂಡಲಗಿರಿ ಗ್ರಾಮದ ಮಹಾನ್ ರಂಗಭೂಮಿ ಕಲಾವಿದ, ಚಲನಚಿತ್ರ ನಟ ಹಿರೇಮಠ ತಮ್ಮ ಬದುಕಿನ ನಾಟಕದ ಪಯಣ ಮುಗಿಸಿ ಇಹಲೋಕ ತ್ಯಜಿಸಿದ್ದಾರೆ.

  ಮೂಲತಃ ಮಂಡಲಗಿರಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ವೀರಯ್ಯ ಹಿರೇಮಠ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ವೃತ್ತಿ ರಂಗಭೂಮಿಯ ಬಳಗವನ್ನು ಸೃಷ್ಟಿಸಬೇಕು ಎಂಬ ಹಂಬಲದಿಂದ ತಮ್ಮ ಸ್ನೇಹ ಬಳಗದೊಂದಿಗೆ ಕೂಡಿಕೊಂಡು ತೋಂಟದಾರ್ಯ ನಾಟ್ಯ ಸಂಘ ಮಂಡಲಗಿರಿ ಎಂಬ ನಾಟಕ ಕಂಪನಿಯನ್ನು ಕಟ್ಟಿ ಬೆಳೆಸಿ ಇಲ್ಲಿಯ ತನಕ ನಡೆಸಿಕೊಂಡು ಬಂದ ಮಹಾನ್ ಕೀರ್ತಿ ವೀರಯ್ಯನವರಿಗೆ ಸಲ್ಲುತ್ತದೆ.

        ವೃತ್ತಿ ರಂಗಭೂಮಿಯಲ್ಲಿ ಸಾವಿರಾರು ಕಲಾವಿದರಿಗೆ ಆಸರೆಯಾಗಿ ದಾರಿದೀಪವಾಗಿದ್ದ ವೀರಯ್ಯ ಹಿರೇಮಠ ಇಂದು (ಮೇ 03 ಶನಿವಾರ) ಬೆಳಗ್ಗೆ 11:00 ಗಂಟೆಗೆ ತಮ್ಮ ಜೀವನದ ಪಯಣ ಮುಗಿಸಿದ್ದು ಅವರ ಅಪಾರ ಅಭಿಮಾನಿ ಬಳಗ ಸೇರಿದಂತೆ ಅವರ ಕುಟುಂಬ ಸದಸ್ಯರನ್ನು ಅಗಲಿರುತ್ತಾರೆ.

Leave a Reply

error: Content is protected !!