ಕುಕನೂರು : ಸಾರ್ವತ್ರಿಕ ವಿಧಾನ ಸಭೆ ಚುನಾವಣೆ ಹಿನ್ನಲೆ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಸವರಾಜ ರಾಯರಡ್ಡಿ ಪರ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಗಾಣಿಗ ಸಮುದಾಯದ ಮುಖಂಡರಾದ ಲಕ್ಷ್ಮಣ ಸವದಿ ಬಹಿರಂಗ ಸಭೆ ಮೂಲಕ ಪ್ರಚಾರ ಕೈಗೊಳ್ಳಲಿದ್ದಾರೆ.
ತಾಲೂಕಿನ ಬೇವೂರು ಗ್ರಾಮದಲ್ಲಿ ಇದೆ ಮೇ.1 ರಂದು ಆಗಮಿಸಿ ಬಸವರಾಜ ರಾಯರಡ್ಡಿ ಪರ ಸಂಜೆ 5 ಗಂಟೆಗೆ ಬಹಿರಂಗ ಸಭೆ ನೆಡಸಲಿದ್ದಾರೆ, ಎಂದು ತಾಲೂಕ ಕಾಂಗ್ರೆಸ್ ಕಾರ್ಯಾಲಯದ ಮೂಲಗಳು ತಿಳಿಸಿವೆ.