ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಇಓ ರಾಮಣ್ಣ ದೊಡ್ಮನಿ ಚಾಲನೆ


ಕುಕನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರ-೬೩ ರ ವ್ಯಾಪ್ತಿಯ ಕುಕನೂರ ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರವಿವಾರ ಮತದಾರರಿಗೆ ಮತದಾನದ ಕುರಿತು, ಮತ್ತು ಮತಗಟ್ಟೆಯ ಕುರಿತು ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಭೂತಗಳ ಮೇಲೆ ಚುನಾವಣಾ ಆಯೋಗ ಸೂಚಿಸಿದ ಧ್ವಜವನ್ನು ಹಾರಿಸಿ ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಬೇಕು ಮತ್ತು ಮತಹಾಕುವಂತೆ ಇತರರನ್ನು ಪ್ರೇರೇಪಿಸಬೇಕೆಂಬ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಚಾಲನೆ ನೀಡಿ ಮಾತನಾಡಿ
ಚುನಾವಣೆಯು ಒಂದು ರಾಷ್ಟ್ರೀಯ ಹಬ್ಬದ ಮಾದರಿಲ್ಲಿ ಎಲ್ಲರೂ ಸಂಭ್ರಮದಿಂದ ಆಚರಿಸಬೇಕು ಎಂದರು. ಈ ಸಂದರ್ಭದಲ್ಲಿ
ತಾಲೂಕ ಪಂಚಾಯತಿ ಸಿಬ್ಬಂದಿಗಳಾದ ಚೆನ್ನಬಸಪ್ಪ ಸಣ್ಣಕರದ, ಹನಮಂತಪ್ಪ ನಾಯಕ, ಮನು ಚಟ್ಟಿ, ಮಾರುತಿ ಗೊಂಡಬಾಳ, ಲಕ್ಷ್ಮಣ ಕೆರಳ್ಳಿ, ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ರಮೇಶ ಅಕ್ಕಿ ಬಸವರಾಜ ಆರಬೇರಳಿನ, ಮೋಕ್ಷಮ್ಮ ಕೊಡ್ಲಿ, ಬಿ.ಎಲ್.ಓ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.

Leave a Reply

error: Content is protected !!