ಪ್ರಚಾರದ ಸಮಯದಲ್ಲಿ ತಲೆಗೆ ಕಲ್ಲು ತೂರಿದ್ದು ಖಂಡನಿಯ:ಶರಣಪ್ಪ ಆಮದಿಹ

ಇಳಕಲ್:ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶದ ಮಾಜಿ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ನಿನ್ನೆ ತಮ್ಮ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದಾಗ ವಿರೋಧ ಪಕ್ಷದವರು ಪರಮೇಶ್ವರ್ ತಲೆಗೆ ಕಲ್ಲು ತೂರಿ ಗಾಯಗೊಳಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿ.ಜೆ.ಪಿ ಪಕ್ಷದವರು
ದಲಿತರ ಮೇಲೆ ಡಬ್ಬಾಳಿಕೆ ಮಾಡುವುದು ಇದು ಒಂದು ಷಡ್ಯಂತರ ದಲಿತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶರಣಪ್ಪ ಆಮದಿಹಾಳ ಅವರು ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿ.ಜೆ.ಪಿ.ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಸರ್ವೆಗಳ ಮೂಲಕ ತಿಳಿದ ಕಾರಣ ನಮ್ಮ ಸಮುದಾಯದ ನಾಯಕರ ಮೇಲೆ ಕಲೂ ತೂರಿದ್ದು ನಾವು ತೀವ್ರವಾಗಿ ಖಂಡಿಸುತ್ತೇವೆ.
ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.
ಬಿ.ಜೆ.ಪಿ ಆಡಳಿತ ವ್ಯವಸ್ಥೆ ಕುಸಿದಿದೆ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ನಮ್ಮ ಸಮುದಾಯದವರನ್ನು ತುಳಿಯಲು ಪ್ರಯತ್ನ ಪಟ್ಟಿದ್ದಾರೆ.
ದಲಿತ ಸಮುದಾಯದವರು ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಅಂತ ಗೊತ್ತಿದ್ದು ಈ ದಬ್ಬಾಳಿಕೆ ಸಲ್ಲದು.
ಸಂವಿಧಾನ ಬದ್ಧವಾಗಿ ಪ್ರಚಾರ ಮಾಡಿ
ನಮ್ಮ ಮೇಲೆ ಈ ರೀತಿ ವರ್ತನೆ ಮಾಡುತ್ತಾ ಹೋದರೆ ನಮ್ಮ ಸಮುದಾಯ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಇದನ್ನು ಅರಿತುಕೊಳ್ಳಬೇಕು.

ಡಾ.ಜಿ ಪರಮೇಶ್ವರ ಅವರ ತಲೆಗೆ ಕಲ್ಲು ತೂರಿದ್ದು ನಾವು ಖಂಡಿಸುತ್ತೇವೆ, ಪದೇ ಪದೇ ನಮ್ಮ ಸಮುದಾಯವನ್ನು ಟಾರ್ಗೆಟ್ ಮಾಡಿ ಇಲ್ಲ ಸಲ್ಲದ ಆರೂಪ ವರಿಸಲು ಬಿಜೆಪಿ ಪಕ್ಷ ದವರು ನಿಲ್ಲಿಸಬೇಕು.ರಾಜಕೀಯ ಮಾಡಬೇಕು ನಿಯತ್ತಾಗಿ ರಾಜಕೀಯ.ಒಂದು ಸಮುದಾಯದ ಮೇಲೆ ಈ ರೀತಿ ಡಬ್ಬಾಳಿಕೆ ಮಾಡುವುದು ನಿಮ್ಮ ಪಕ್ಷದ ಲಕ್ಷಣವಲ್ಲ.

ನಮ್ಮ ಸಂಸ್ಕೃತಿ ಎಲ್ಲಾ ಸಮುದಾಯವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಂಸ್ಕೃತಿ. ಮಾನವೀಯ ಮೌಲ್ಯವನ್ನು ಬಿತ್ತಿದಂತಹ ನಾಡಿದು.ಮಲ್ಲಿಕಾರ್ಜುನ ಕರ್ಗೆ ಅವರ ಮೇಲು ಸಹ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುತ್ತಿರುವುದು ತಪ್ಪು.
ನಮ್ಮ ದಲಿತ ಸಮುದಾಯವನ್ನು ಬೆಳೆಯಲು ಬಿಜೆಪಿ ಪಕ್ಷ ಬಿಡುವುದಿಲ್ಲ, ನಮ್ಮ ಚಲವಾದಿ ಸಮುದಾಯದವರ ಮೇಲೆ ಹಲ್ಲೆ ಸರ್ವೇ ಸಾಮಾನ್ಯವಾಗಿ ನಡಿತಾಯಿದೆ. ಇದು ಹೀಗೆ ಮುಂದೆ ಬಂದರೆ ನಾವೆಲ್ಲರೂ ನಿಮ್ಮ ಸುಮ್ಮನೆ ಇರುವುದಿಲ್ಲ.

ಡಾ.ಜಿ.ಪರಮೇಶ್ವರ ಅವರ ಮೇಲೆ ಹಲ್ಲೆ ಮಾಡಿದವರ ಮೇಲೆ
ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಹಿತ ರಕ್ಷಣಾ ವೇದಿಕೆಯ ಸದಸ್ಯ ಸುರೇಶ್ ಜಂಗ್ಲಿ ಮಾಡಿದ್ದಾರೆ.

ವರದಿ:ಮಹಾಂತೇಶ ಯಲಬುರ್ತಿ ಇಳಕಲ್

Leave a Reply

error: Content is protected !!