ಹರ್ಷ ತಂದ ವರ್ಷದ ಮೊದಲ ಮಳೆಗೆ ಜನ ಫುಲ್ ಖುಷ್


ಕುಕನೂರು : ಬೇಸಿಗೆ ಜಳಕ್ಕೆ ಬೇಸತ್ತಿದ್ದ ಜನರು ಮಳೆ ಸುರಿದು ತಂಪಾದ ವಾತಾವರಣ ನಿರ್ಮಾಣವಾಗಿದ್ದು ಜನ ಹರ್ಷಗೊಂಡಿದ್ದಾರೆ.
ಮಧ್ನಾಹ್ನದಿಂದಲೆ ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು ಸಂಜೆಯಾಗುತ್ತಿದ್ದೆ ತಸು ಮಳೆ ಬಂದು ಹೋಯಿತು. ಮತ್ತೆ ಮತ್ತೆ ಸುರಿದ ಮಳೆ ೬ ಮುತ್ತರ ಸುಮಾರಿಗೆ ಪ್ರಾರಂಭವಾಗಿ ಸುಮಾರು 1 ಗಂಟೆಗೂ ಅಧಿಕವಾಗಿ ಅತಿ ರಭಸದಿಂದ ಮಳೆ ಸುರಿಯಿತು.
ಪಟ್ಟಣದಲ್ಲಿ ಪ್ರತಿ ಶುಕ್ರವಾರದಂತೆ ಇಂದು ಸಹ ಸಂತೆ ಮಾರುಕಟ್ಟೆಯನ್ನು ಪಟ್ಟಣದ ಎಪಿಎಮ್‌ಸಿಯಲ್ಲಿ ನೆಡೆಸಿದ್ದು ಮಳೆಯಿಂದಾಗಿ ವ್ಯಾಪಾರಸ್ಥರು ವ್ಯಾಪರವಿಲ್ಲದೆ ತಮ್ಮ ವಸ್ತುಗಳ ಸುರಕ್ಷಣೆಯನ್ನು ಕಾಪಾಡಿಕೊಳ್ಳಲು ಹರಸಾಹಸ ಪಡಬೇಕಾಯಿತು. ಕತ್ತಲಾಗಿತ್ತು ಒಂದು ಕಡೆಯಾದರೆ ವಿದ್ಯುತ್ ಕಟ್ ಆಗಿದ್ದು ವ್ಯಾಪಾರಸ್ಥರು ಕತ್ತಲಲ್ಲಿ ತಮ್ಮ ಸರಕುಗಳನ್ನು ಶೇಖರಿಸಿಕೊಳ್ಳಲು ಕಷ್ಟಪದುತ್ತಿರುವುದು ಕಂಡು ಬಂದಿತು.
ಒಟ್ಟಿನಲ್ಲಿ ವರ್ಷದ ಮೊದಲ ಮಳೆ ರೈತರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಹರ್ಷವನ್ನುಂಟು ಮಾಡಿದೆ.

Leave a Reply

error: Content is protected !!