ಇಳಕಲ್: ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಮಾಜಿ ಶಾಸಕ ವಿಜಯಾನಂದ ಎಸ್.ಕಾಶಪ್ಪನವರು ಭರ್ಜರಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಅವರನ್ನು ಹೇಮವಾಡಗಿ, ತಾರಿವಾಳ, ಕಣ್ಣೂರ, ತುರಮರಿ ಗ್ರಾಮದವರು ಅದ್ದೂರಿ ಸ್ವಾಗತ ಕೊರಿದ್ದಾರೆ.
ಹುನಗುಂದ ತಾಲೂಕಿನ ಹೇಮವಾಡಗಿ, ತಾರಿವಾಳ, ಕಣ್ಣೂರ, ತುರಮರಿ ಗ್ರಾಮಗಳಿಗೆ ಮನೆ – ಮನೆಗಳಿಗೆ ತೆರಳಿ ಕಾಂಗ್ರೆಸ್ ಪಕ್ಷವನ್ನು ಆರಿಸಿ ತನ್ನಿ ತಾಲೂಕಿನ ಸೇವೆಮಾಡಲು ಅನಿಯಾಗುವೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡನ ಸೌಲಭ್ಯಗಳು ಪ್ರತಿ ಮನೆ ಮನೆಳಿಗೆ ತಲುಪುತ್ತವೆ. ಮತದಾರ ಭಾಂದವರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ಮತ ಹಾಕಿ. ಇಗಾಗಲೇ ದೇಶದ ಜನಗಳು ಬೆಲೆ ಏರಿಕೆಗೆ ಬೆಂಡಾಗಿದ್ದಾರೆ. ದಿನನಿತ್ಯದ ವಸ್ತುಗಳ ಮೇಲೆ ಜಿ.ಎಸ್.ಟಿ ಹೇರಿ ಬಡಜನಗಳ ರಕ್ತ ಇರುತ್ತಿರುವ ಬಿ.ಜೆ.ಪಿ ಸರಕಾರಕ್ಕೆ ತಾವುಗಳು ತಕ್ಕ ಪಾಠ ಕಲಿಸಬೇಕು ಎಂದು ಈ ಮೂಲಕ ಮತಯಾಚನೆ ಮಾಡಿದರು.
ವರದಿ:- ಮಹಾಂತೇಶ, ಇಲ್ಲಕಲ್