Missing case : ವ್ಯಕ್ತಿ ಕಾಣೆ, ಪತ್ತೆಗೆ ಸಹಕರಿಸಲು ಮನವಿ

You are currently viewing Missing case : ವ್ಯಕ್ತಿ ಕಾಣೆ, ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ : ಯಲಬುರ್ಗಾ ತಾಲೂಕಿನ ಗುಂತಮಡು ಗ್ರಾಮದ ನಿವಾಸಿ ಯಂಕಪ್ಪ ತಂದೆ ಹುಲಗಪ್ಪ ಅಳ್ಳಳ್ಳಿ ಎಂಬ ವ್ಯಕ್ತಿಯು 2023ರ ಫೆಬ್ರವರಿ 09 ರಂದು ಮುಂಜಾನೆ 8.30 ಗಂಟೆ ಸುಮಾರಿಗೆ ಕಾಣೆಯಾಗಿದ್ದು, ಈ ಬಗ್ಗೆ ಬೇವೂರ ಪೊಲೀಸ್ ಠಾಣೆಯ ಗುನ್ನೆ ನಂ: 18/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ವಯಸ್ಸು 40 ವರ್ಷ, 5.8 ಎತ್ತರ, ದುಂಡು ಮುಖ, ಕಪ್ಪು ಬಿಳಿ ಕೂದಲು, ದಪ್ಪ ಮೂಗು ಕಪ್ಪು ಮೈಬಣ್ಣ, ಸದೃಡ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಬಲಗೈನ ಮುಂಗೈ ಮೇಲೆ ಶಾಂತಮ್ಮ ಅಂತಾ ಹಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಮೈ ಮೇಲೆ ಲುಂಗಿ ಮತ್ತು ಶರ್ಟ ಧರಿಸಿಕೊಂಡು ಹೊಗಿರುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಅಥವಾ ಪತ್ತೆಯಾದಲ್ಲಿ ಬೇವೂರ ಪೊಲೀಸ್ ಠಾಣೆಯ ಪಿ.ಎಸ್.ಐ ಮೂ.ಸಂ: 9480803751 ಮತ್ತು ದೂ.ಸಂ: 08534-227641 ಅಥವಾ ಕೊಪ್ಪಳ ಕಂಟ್ರೋಲ್ ರೂಂ ದೂ.ಸಂ: 08539-220222 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಬೇವೂರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!