LOCAL NEWS : ಭಾರತೀಯರು ಮೂಲತಃ ಉತ್ಸವ ಪ್ರಿಯರು. ಉತ್ಸವ ಇದ್ದಲ್ಲಿ ಸಂಸ್ಕೃತಿ ಇರುತ್ತೆ : ಹಿರಿಯ ಸಾಹಿತಿ ಡಾ. ಕೆ. ಬಿ ಬ್ಯಾಳಿ

You are currently viewing LOCAL NEWS : ಭಾರತೀಯರು ಮೂಲತಃ ಉತ್ಸವ ಪ್ರಿಯರು. ಉತ್ಸವ ಇದ್ದಲ್ಲಿ ಸಂಸ್ಕೃತಿ ಇರುತ್ತೆ : ಹಿರಿಯ ಸಾಹಿತಿ ಡಾ. ಕೆ. ಬಿ ಬ್ಯಾಳಿ

LOCAL NEWS : ಭಾರತೀಯರು ಮೂಲತಃ ಉತ್ಸವ ಪ್ರಿಯರು.

ಕುಂತಳೋತ್ಸವ ಕಾರ್ಯಕ್ರಮ

ಕುಕನೂರು : ಭಾರತೀಯರು ಮೂಲತಃ ಉತ್ಸವ ಪ್ರಿಯರು. ಉತ್ಸವ ಇದ್ದಲ್ಲಿ ಸಂಸ್ಕೃತಿ ಇರುತ್ತದೆ. ಸಾಂಕೇತಿಕ ಉದ್ದೇಶಗಳೂ, ಮೌಲ್ಯಗಳೂ, ಸಂದೇಶಗಳೂ ಇರುತ್ತವೆ ಎಂದು ಹಿರಿಯ ಸಾಹಿತಿ ಡಾ. ಕೆ. ಬಿ ಬ್ಯಾಳಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾನಸ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಏರ್ಪಡಿಸಲಾಗಿದ್ದ ಕುಂತಳೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪರಿಮಿತ ಸಂಪತ್ತು ಇರುತ್ತದೆಯೋ ಅಲ್ಲಿ ಉತ್ಸವ ನಡೆಯುತ್ತದೆ. ಪರ್ವ ಎಂದರೆ ಹಬ್ಬ. ಸಂತೋಷ ಕೊಡುವ ದಿನ. ಹಬ್ಬ ಆಚರಿಸುವ ಇನ್ನೊಂದು ಅಂಗ ವ್ರತ. ನಿಯಮದಲ್ಲಿದ್ದುಕೊಂಡು ಕಾರ್ಯಾನುಷ್ಠಾನ ಮಾಡುವ ವ್ರತ ದೇಹ, ಮನಸ್ಸು, ಇಂದ್ರಿಯ, ಬುದ್ಧಿಗಳನ್ನು ಸಂಸ್ಕಾರಗೊಳಿಸುತ್ತದೆ. ಈ ಎಲ್ಲ ತತ್ವದರ್ಶಗಳನ್ನು ತಿಳಿದುಕೊಂಡು ಹಬ್ಬದಾಚರಣೆ ಮಾಡಬೇಕು ಎಂದರು.

ಕುಂತಳ ಭವ್ಯ ಪರಂಪರೆಯ ನಾಡು, ಪುರಾತನ ಇತಿಹಾಸದಲ್ಲಿ ಚಂದ್ರಹಾಸನೆಂಬ ಮಂತ್ರಿ ಆಳಿದ್ದಾನೆ. ಇಲ್ಲಿ ಐತಿಹಾಸಿಕ ದೇವಸ್ಥಾನಗಳಾದ ನವಲಿಂಗೇಶ್ವರ ಹಾಗೂ ಮುಷ್ಟಿ ಕಲ್ಮೇಶ್ವರ ಒಳಗೊಂಡಿದೆ. ಕಲ್ಲಿನ ನಾಡು ಎಂದು ಪ್ರಸಿದ್ಧವಾದ ಕುಂತಳ ಈಗ ಕುಕನೂರಾಗಿ ನಾಮಂಕಿತ ಬದಲಾವಣೆಯಾಗಿದೆ. ಅದೇ ರೀತಿ ತಾಲ್ಲೂಕಿನಲ್ಲಿ ಶಿಕ್ಷಣ ಕ್ರಾಂತಿಯಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವಿ ಬಳೂಟಗಿ ಮಾತನಾಡಿ, ಐತಿಹಾಸಿಕ ಪ್ರಸಿದ್ಧವಾದ ಕುಂತಳಾಪುರದ ಕುಂತೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಸಮಯೋಚಿತವಾಗಿದೆ. ಸಂಘಗಳು ಸ್ವಯಂ ಸ್ಫೂರ್ತಿಯಿಂದ ಇಂತಹ ಸಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಪ್ರಾಚಾರ್ಯ ಈಶಪ್ಪ ಮಳಗಿ ಹಾಗೂ ವೈದ್ಯ ಜಂಬೂನಾಥ್ ಅಂಗಡಿ ಮಾತನಾಡಿದರು.

ಅಮೋಘಸಿದ್ದೇಶ್ವರ ಭಜನಾ ಸಂಘದ ವತಿಯಿಂದ ಬಜನಾ ಕಾರ್ಯಕ್ರಮ ನೆರವೇರಿತು. ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಸಂಗಡಗರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು. ಯುವ ಗಾಯಕ ಬರಮಪ್ಪ ಸಾಬಳ್ಳಿ ಅವರು ಕುಂತಳೋತ್ಸವ ಬಗ್ಗೆ ಸ್ವರಚಿತ ಗಾಯನ ಹಾಡಿದರು. ಸಮೂಹ ನೃತ್ಯ ಪ್ರದರ್ಶನಗೊಂಡವು.

ಗಾಯಕ ಮುರಾರಿ ಭಜಂತ್ರಿ, ಉಪನ್ಯಾಸಕ ಮಾರುತಿ ಹೆಚ್, ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ಅಂಗಡಿ, ಬರಮಪ್ಪ ನೋಟಗಾರ್, ಬರಮಪ್ಪ ಸಾಬಳ್ಳಿ, ಮಹಾಂತೇಶ್ ಹಂಡಿ, ಜೀವನ್ ಸಾಬ್, ಅಶೋಕ್ ಚನ್ನಪ್ಪನಹಳ್ಳಿ, ಮುತ್ತುರಾಜ್ ದೇವರಮುನಿ ಇದ್ದರು.

Leave a Reply

error: Content is protected !!