LOCAL NEWS : ಪ್ರಾಮಾಣಿಕವಾಗಿ ಸಮಾಜದ ಕಾರ್ಯನಿರ್ವಹಿಸಿ : ಮಹದೇವ ದೇವರು
ಕುಕನೂರು : “ಸರಕಾರದ ಭಾಗವಾಗಿ ಸಮಾಜದ ಎಲ್ಲಾ ವರ್ಗದವರಿಗೆ ಅನ್ನದಾಸೋಹ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಿಮಗೆ ಆ ಅನ್ನದಾನೇಶ್ವರ ಸ್ವಾಮಿಗಳ ಆಶೀರ್ವಾದ ಸದಾ ಇರಲಿದೆ. ಅತ್ಯಂತ ಪ್ರಾಮಾಣಿಕವಾಗಿ ಸಮಾಜದ ಕಾರ್ಯನಿರ್ವಹಿಸುತ್ತೀರಿ ಎಂಬ ನಂಬಿಕೆ ಇದೆ” ಎಂದು ಮಹದೇವಯ್ಯಾ ದೇವರು ಮಹಾಸ್ವಾಮಿಗಳು ಹಿತವಚನ ನೀಡಿದರು.
ಇಂದು ಅನ್ನದಾನೇಶ್ವರ ಮುಂಡರಗಿ ಶಾಖ ಮಠ ಕುಕನೂರಿಲ್ಲಿ ಶ್ರೀ ಅನ್ನದಾನೇಶ್ವರ ತಾಲೂಕು ಸರ್ಕಾರಿ ಪಡಿತರ ವಿತರಕರ ಸಂಘ ಕುಕನೂರು ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಮಾದೇವ ಮಹಾಸ್ವಾಮಿಗಳು ಮಾತನಾಡಿ, “ತಾಲೂಕ ಸಹಕಾರಿ ಪಡಿತರ ವಿತರಕರ ಸಂಘಕ್ಕೆ ಮಹಾಯೋಗಿ ಅನ್ನದಾನೇಶ್ವರನ ಹೆಸರಿಟ್ಟಿರುವುದು, ಬಹಳ ಮೆಚ್ಚುವಂತ ಕಾರ್ಯ, ಮೊಟ್ಟ ಮೊದಲ ಬಾರಿಗೆ ಈ ತಾಲೂಕಿನಲ್ಲಿ ಒಬ್ಬ ಮಹಾಯೋಗಿಯ ಹೆಸರನ್ನು ಒಂದು ಸಂಘ ಸಂಸ್ಥೆ ಇಟ್ಟಿರುವುದು ವಿಶೇಷವಾಗಿದೆ. ಮಹಾಯೋಗಿ ಅನ್ನದಾನೇಶ್ವರನ ಈ ಮೂಲಕ ಸ್ಮರಿಸುವ ಒಂದು ಪುಣ್ಯದ ಕೆಲಸ ಮಾಡಿದ್ದೀರಿ, ನಿಮಗೆ ಸದಾ ಒಳ್ಳೆಯದಾಗಲಿದೆ ಎಂದು ಹರಿಸಿದರು.
ಶ್ರೀ ಅನ್ನದಾನೇಶ್ವರ ತಾಲೂಕು ಸರ್ಕಾರಿ ಪಡಿತರಕರ ಸಂಘ (ರಿ). ಕುಕನೂರು ಘಟಕದ ಪದಾಧಿಕಾರಿಗಳು
1. ಗೌರವ ಅಧ್ಯಕ್ಷರಾಗಿ ತೋಟಯ್ಯ ಸ್ವಾಮಿ ತಳಕಲ್.
2. ಸಂಘದ ಅಧ್ಯಕ್ಷರಾಗಿ ಲಿಂಗರಾಜು ಕಂದಗಲ್ ಮಂಗಳೂರು
3. ಉಪಾಧ್ಯಕ್ಷರಾಗಿ ಕನಕಪ್ಪ ಚಲವಾದಿ ಚಿಕೇನಕೊಪ್ಪ
4. ಶಿವಸಯ ಮುತ್ತಿನಪೆಂಡಿಮಠ ಶಿರೂರು, ಪ್ರಧಾನ ಕಾರ್ಯದರ್ಶಿ.
5. ಈರಣ್ಣ ಆಂಟಿ, ಕುಕನೂರು, ಖಜಾಂಚಿ.
6. ಕುಬೇರಪ್ಪ ರೋಣದ ನಿರ್ದೇಶಕರು
7. ಸಿದ್ದನಗೌಡ ಪೊಲೀಸ್ ಪಾಟೀಲ್ ನಿರ್ದೇಶಕರು
8. ಶಿವಶರಣಪ್ಪ ಮ್ಯಾಳಿ ನಿರ್ದೇಶಕರು
9. ಬಸವರಾಜ ಮಠಪರವಿ ನಿರ್ದೇಶಕರು
10. ಷಣ್ಮುಖ ಗೌಡ್ರು ನಿರ್ದೇಶಕರ
11. ಶ್ರೀಮತಿ ನಾಗರತ್ನ ದಿವಟರ್ ನಿರ್ದೇಶಕರು
12. ಶ್ರೀಮತಿ ಅಕ್ಕಮಹಾದೇವಿ ಶಾಸ್ತ್ರಿ ನಿರ್ದೇಶಕರು
ಈ ಸಂದರ್ಭದಲ್ಲಿ ತಹಸೀಲ್ದಾರ್ ಗ್ರೇಟ್ 2 ಮುರುಳಿಧರ್ ಕುಲಕರ್ಣಿ, ಮಂಜುನಾಥ್ ಕೆ ಆಹಾರ ನಿರೀಕ್ಷಕರು, ಹಾಲಯ್ಯ ಹುಡೇಜಾಲಿ ಜಿಲ್ಲಾಧ್ಯಕ್ಷರು, ಸಂಗನಗೌಡ ಕುಷ್ಟಗಿ, ನಾಗರಾಜ್ ಕಾರಟಗಿ, ಹೊನ್ನಮ್ಮ, ದಾನಗೌಡ್ರು ಹಿರಿಯೂರು, ಮಂಜುನಾಥ್ ಗಂಗಾವತಿ, ಮಲ್ಲಪ್ಪ ಶೆಟ್ರು, ನಿತ್ಯಾನಂದ ಮರಬಗಿ, ಕಲ್ಲಪ್ಪ ಕಲ್ಲೂರು ಇತರರು ಇದ್ದರು.