ಕುಕುನೂರು : ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ಓದುವ ಹವ್ಯಾಸ ಬೆಳಸಿಕೊಂಡರೆ ಉತ್ತಮ ಭವಿಷ್ಯದ ಜೊತೆಗೆ ಉನ್ನತ ಸ್ಥಾನಮಾನ ನಿಮ್ಮದಾಗುತ್ತದೆ ಎಂದು ಮಾರುತಿ ಹೊಸಮನಿ ಹೇಳಿದರು.
ತಾಲೂಕಿನ ಗಾವರಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟನೆ ಮಾಡಿ ಅವರು ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಅಭಿರುಚಿ ಬೆಳಸಿಕೊಳ್ಳ ಬೇಕಿದೆ, ಪುಸ್ತಕ ಓದುವ ಮೂಲಕ ಜ್ಞಾನ ಸಂಪಾದಿಸಿಕೊಂಡಗಲೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಮಾರುತಿ ಹೊಸಮನಿ ಹೇಳಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ನಿಂದ ಕೊಡಲಾಗಿರುವ ಆಟದ ಸಾಮಗ್ರಿಗಳನ್ನು ಸದಸ್ಯ ಮಹೇಶ್ ಲಕಮಾಪುರ ವಿತರಿಸಿ ಮಕ್ಕಳು ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆ ಸಹಾಯಕ ಎಂದು ಹೇಳಿದರು. ಸವಿ ನೆನಪಿಗಾಗಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೇರೆಯಲಾಯಿತು.
ಈ ಸಂದರ್ಭದಲ್ಲಿ ಮುಕ್ಯೋಪಾಧ್ಯಾಯ ಶರಣಪ್ಪ ಎಚ್, ಶಿಕ್ಷಕರಾದ ಬಸವರಾಜ್ ಉಪ್ಪಿನ್, ಉಮಾ ಮಹೇಶ್ವರ, ನಾಗರಾಜ್ ಹಣಸಿ, ಖಾಜಾ ಸಾಬ್ ಹೊಸಳ್ಳಿ, ಗಾಳೆಪ್ಪ ದೊಡ್ಡಮನಿ, ಮೈಲಾರಪ್ಪ ಗೊರವರ,ಹನುಮಂತಪ್ಪ ದೊಡ್ಮನಿ ,ಮಲ್ಲಪ್ಪ ಹಲಗೇರಿ ,ಹನುಮಂತಪ್ಪ ಮಾಳೆಕೊಪ್ಪ ,ರಾಮಣ್ಣ ಇಳಿಗೇರ, ಇತರರು ಉಪಸ್ಥಿತರಿದರು.