ಪ್ರಜಾವಿಕ್ಷಣೆ ಸುದ್ದಿ :-
LOCAL NEWS : ಲಿಂಗೈಕ್ಯ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರರು “ಮಾತೃ ಹೃದಯಿ ಮನಸ್ಸು”ಳ್ಳವರು : ಶ್ರೀಶೈಲ ಜಗದ್ಗುರುಗಳು
ಕುಕನೂರು : ತಮ್ಮ ಸನ್ನಿಧಾನಕ್ಕೆ ಬಂದ ಭಕ್ತರಿಗೆ ಮಾತೃ ಹೃದಯದಿಂದ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದರು ಎನ್ನುವುದು ಬಹಳ ವಿಶೇಷ, ಲಿಂಗೈಕ್ಯ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾಜಮುಖಿ ಕಾರ್ಯಗಳು ಬದವಟ್ಟಿ ಗ್ರಾಮಕ್ಕೆ ಸೀಮಿತವಾಗದೆ.. ನಾಡಿನ ಉದ್ದಗಲಕ್ಕೂ ಸಂಚರಿ… ಧರ್ಮ ಜಾಗೃತಿ ಮಾಡುವುದರ ಜೊತೆಗೆ ಸಮಾಜದಲ್ಲಿ ಉತ್ತಮವಾಗಿ ಜೀವನಮಾಡುವುದನ್ನ ತಿಳಿಸಿದವರು ಎಂದು ಪಂಚಪೀಠಿಗಳಲ್ಲೊಂದಾದ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬೆದವಟ್ಟಿ (ವೇದವಟಿ) ಗ್ರಾಮದಲ್ಲಿ ಶ್ರೀಶೈಲ ಪೀಠದ ಆಧೀನದಲ್ಲಿರುವ ಹಿರೇಮಠ ಸಂಸ್ಥಾನ ಶ್ರೀಮಠದ ಶ್ರೀಗಳಾದ ಶ್ರೀ ಶಿವ ಸಂಗಮೇಶ್ವರ ಶಿವಾಚಾರ್ಯರು ಮೇ 28 ರಂದು (28.05.2025) ಶಿವಾಜಿನಗರದ ಪ್ರಯುಕ್ತ ಭಾನುವಾರ ಶ್ರೀಮಠದಲ್ಲಿ ಲಿಂಗೈಕ್ಯ ರಾದ ಪ್ರಯುಕ್ತ ಭಾನುವಾರದಂದು ಶ್ರೀಮಠದಲ್ಲಿ ಅವರ ಪುಣ್ಯಾರಾಧನೆಯನ್ನು ಶ್ರೀಶೈಲ ಜಗದ್ಗುರುಗಳ ಸನ್ನಿಧಾನದಲ್ಲಿ ನೆರವೇರಿಸಲಾಯಿತು.
ಬಳಿಕ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಶೈಲ ಜಗದ್ಗುರುಗಳು, ‘ಲಿಂಗೈಕ್ಯ ಶ್ರೀಶಿವಸಂಗಮೇಶ್ವರ ಶಿವಾಚಾರ್ಯರು ನಿರಂತರವಾಗಿ ಧರ್ಮ ಕಾರ್ಯಗಳನ್ನು ಮಠದ ಭಕ್ತರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿಕೊಂಡು, ಶ್ರೀ ಮಠದ ಸೇವೆ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತ ಈ ಭಾಗದ ಹಲವಡೆಗಳಲ್ಲಿ ಧರ್ಮ ಜಾಗೃತಿ ಕಾರ್ಯ ಮಾಡಿದಂತ ಮಹಾನ್ ಪುರುಷರಾಗಿದ್ದಾರೆ. ಶ್ರೀಮಠದ ಪೀಠ ಮತ್ತು ಭಕ್ತರನ್ನು ಸಹ ಪ್ರೀತಿ ಗೌರವದಿಂದ ಸಮಾನರಾಗಿ ನೋಡಿಕೊಂಡು ಹೋದ ಕೀರ್ತಿ ಅವರದ್ದಾಗಿದ್ದು, ಅವರ ಅಗಲಿಕೆಯಿಂದ ಈ ಭಾಗದ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಆದರೆ ಶಿವನ ಕರೆ ಮುಂದೆ ಎಲ್ಲರೂ ಕ್ಷಣಿಕವಾಗಿದ್ದು, ಭಗವಂತನ ಇಚ್ಛೆಯಂತೆ ಸಾಗಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಶ್ರೀಗಳು ಸದಾಚಾರ ಮತ್ತು ಸದ್ ವಿಚಾರದೊಂದಿಗೆ ನಗುನಗುತ್ತಾ ಜೀವನ ಪಾಲನೆಯಿಂದ ಈ ಭಾಗದ ಭಕ್ತರ ಮನದಲ್ಲಿ ಮಹಾತ್ಮರಾಗಿ ಶಾಶ್ವತ ನೆಲೆಯೂರಿದ್ದಾರೆ’ ಎಂದು ಹೇಳಿದರು.
‘ಏನೇನೂ ಇಲ್ಲದ ಶ್ರೀಮಠಕ್ಕೆ ಪೀಠಾಧಿಕಾರಿಯಾಗಿ ಆಯ್ಕೆಯಾಗಿ ಗಂಧದ ಕಡ್ಡಿಯಂತೆ ಮಠದ ಏಳಿಗೆ ಹಾಗೂ ಭಕ್ತರ ಅಭಿವೃದ್ಧಿಗಾಗಿ ತಮ್ಮನ್ನು ತಾವೇ ಸವಿಸಿಕೊಂಡು, ಸಮಾಜಕ್ಕೆ ಗಂಧದ ಪರಿಮಳವನ್ನು ನೀಡಿರುವ ಇವರು, ಪ್ರತಿಯೊಬ್ಬರಿಗೂ ಆದರ್ಶ ಪುರುಷರಾಗಿ ಜೀವನ ಸಾಗಿಸಿ ವಿವಿಧ ಧಾರ್ಮಿಕ ಕಾರ್ಯಗಳಿಂದ ಬೆದವಟ್ಟಿ ಗ್ರಾಮಕ್ಕೆ ಕೀರ್ತಿ ತಂದಿದ್ದು, ಜೊತೆಗೆ ದಾಸೋಹಕ್ಕೆ ಬ್ಯಾರಲ್ ಗಟ್ಟಲೆ ತುಪ್ಪವನ್ನು ಸ್ವೀಕರಿಸಿ ಭಕ್ತರಿಗೆ ಹಣಪಡಿಸಿದ ಅಪರೂಪದ ವ್ಯಕ್ತಿತ್ವ ಶ್ರೀಗಳದ್ದಾಗಿದ್ದರು.
‘ಅವರ ಮೃತ್ಯು ಪತ್ರದಲ್ಲಿನ ಲಿಖಿತದಂತೆ ಅವರ ಆತ್ಮಕ್ಕೆ ಶಾಂತಿ ಸಿಗುವರೊಂದಿಗೆ ಮಠದ ಭವಿಷ್ಯವನ್ನು ಮುಂದಿಟ್ಟುಕೊಂಡು ಭವ್ಯ ಪರಂಪರೆಯ ಗತವೈಭವವನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಠದ ಭಕ್ತವೃಂದ, ಗ್ರಾಮಸ್ಥರು ಹಾಗೂ ಮಠದ ಜವಾಬ್ದಾರಿಯನ್ನು ಹೊಂದಿಕೊಂಡಿರುವ ಯಲಬುರ್ಗಾ ಪಟ್ಟಣದ ಸಂಸ್ಥಾನ ಹಿರೇಮಠದ ಶ್ರೀಗಳು ಜವಾಬ್ದಾರಿ ಹೊತ್ತುಕೊಂಡು ಮುಂದಿನ ಪೀಠಾಧಿಕಾರಿಯ ಪಟ್ಟಾಧಿಕಾರ ಮಾಡಿ ಮಠದ ಶ್ರೇಯೋಭಿವೃದ್ಧಿಗೆ ಸದಾ ದುಡಿಯೋದರೊಂದಿಗೆ ಲಿಂಗೈಕ್ಯ ಶ್ರೀ ಶಿವ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಆತ್ಮಕ್ಕೆ ಶಾಂತಿ ತರಬೇಕೆಂದು’ ತಿಳಿಸಿದರು.
ಈ ವೇಳೆಯಲ್ಲಿ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ಶ್ರೀಹಿರೇಮಠ ಯಲಬುರ್ಗಾ, ಚಳಗೇರಿ ಮಠದ ಶ್ರೀವೀರ ಸಂಗಮೇಶ್ವರ ಶಿವಾಚಾರ್ಯರು, ಮಂಗಳೂರಿನ ಅರಳಲೇ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಕುಕನೂರು ಪಟ್ಟಣದ ಅನ್ನದಾನಿಶ್ವರ ಶಾಖಾಮಠದ ಪೂಜ್ಯರಾದ ಶ್ರೀ ಮಹಾದೇವ ಮಹಾಸ್ವಾಮಿಗಳು, ಕುಷ್ಟಗಿ ಪಟ್ಟಣದ ಮದ್ದಾನೆ ಮಠ ಶ್ರೀಗಳು, ಅಂತೂರು ಬೆಂತೂರು ಶ್ರೀ ಕುಮಾರಸ್ವಾಮಿ ದೇವರು ಹಾಗೂ ಇನ್ನಿತರ ಮಠಾಧಿಪತಿಗಳು ಹಾಗೂ ಪ್ರಭಾಕರ ಪಾಲ್ಗೊಂಡಿದ್ದರು.