LOCAL NEWS : ಕುಕನೂರು : ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಕಿ ಕರಡಿ ದಾಳಿ..!: ಗಂಭೀರ ಗಾಯ..!!

You are currently viewing LOCAL NEWS : ಕುಕನೂರು : ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಕಿ ಕರಡಿ ದಾಳಿ..!: ಗಂಭೀರ ಗಾಯ..!!

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಕುಕನೂರು : ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಕಿ ಕರಡಿ ದಾಳಿ..!: ಗಂಭೀರ ಗಾಯ..!!

ಕುಕನೂರು : ತಾಲೂಕಿನ ರಾವಣಕಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆ ಹತ್ತಿರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಕಿ ಕರಡಿ ದಾಳಿ ಮಾಡಿದ್ದು, ರೈತನು ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾವಣಕಿ ಗ್ರಾಮದ ಇಂದು ಸಂಜೆ ವೇಳೆಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಯ ಹತ್ತಿರ ನಾಗಪ್ಪ ಬೆಂಚಳ್ಳಿ ಎಂಬ ರೈತನ ಕರಡಿ ದಾಳಿಗೆ ತುತ್ತಾಗಿದ್ದು. ಕರಡಿ ದಾಳಿ ಮಾಡುವ ವೇಳೆಯಲ್ಲಿ ಕಿರಿಚಾಡಿಕೊಂಡಿದ್ದು ಅಕ್ಕಪಕ್ಕದ ಕೃಷಿ ಜಮೀನುಗಳಲ್ಲಿ ಕಾರ್ಯನಿರ್ತರಾಗಿದ್ದ ರೈತರು ನಾಗಪ್ಪನವರ ಕಿರಿಚಾಟ ಕೇಳಿ ಓಡಿಬಂದಿದ್ದು ಕರಡಿ ಇವರ ಮೇಲೆ ಎರಗಿರುವುದನ್ನು ಪ್ರತ್ಯಕ್ಷವಾಗಿ ಕಂಡಿರುತ್ತಾರೆ ಮತ್ತು ರೈತರು ತಂಡೋಪವಾಗಿ ಓಡಿ ಬರುತ್ತಿರುವುದನ್ನು ಕಂಡ ಕರಡಿ ನಾಗಪ್ಪ ಬೆಂಚಳ್ಳಿ ಅವರನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತದೆ.

ಈ ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಕರಡಿಯ ಹುಡುಕಾದ ಕಾರ್ಯಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಜೊತೆಗೆ ಇಲ್ಲಿ ವಸತಿ ಶಾಲೆ ಇರುವುದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯರು ಆತಂಕ ಮೂಡಿದೆ. ಈ ದುರ್ಘಟನೆಯಿಂದ ಗ್ರಾಮದ ಜನತೆ ಭಯಭೀತಗೊಂಡಿದ್ದು ಒಬ್ಬಂಟಿಗಳಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಎಂದು ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ಡಂಗುರ ಹೊಡೆಸಿರೋದಾಗಿ ಗ್ರಾಮದ ಪ್ರಮುಖರಾದ ಮಲ್ಲಯ್ಯ ಮಠದ ಅವರು ಪ್ರಜಾವೀಕ್ಷಣೆ ಡಿಜಿಟಲ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave a Reply

error: Content is protected !!