You are currently viewing BREAKING : ಸ್ವಕ್ಷೇತ್ರದಲ್ಲಿ ದಲಿತ ವಿರೋಧಿ ನಡೆ : ಸಚಿವ ತಂಗಡಗಿ ವಿರುದ್ದ ತೀವ್ರ ಆಕ್ರೋಶ..!

BREAKING : ಸ್ವಕ್ಷೇತ್ರದಲ್ಲಿ ದಲಿತ ವಿರೋಧಿ ನಡೆ : ಸಚಿವ ತಂಗಡಗಿ ವಿರುದ್ದ ತೀವ್ರ ಆಕ್ರೋಶ..!

ಪ್ರಜಾ ವೀಕ್ಷಣೆ ಸುದ್ದಿ : 

BREAKING : ಸ್ವಕ್ಷೇತ್ರದಲ್ಲಿ ದಲಿತ ವಿರೋಧಿ ನಡೆ : ಸಚಿವ ತಂಗಡಗಿ ವಿರುದ್ದ ತೀವ್ರ ಆಕ್ರೋಶ..!

ಕೊಪ್ಪಳ : ಜಿಲ್ಲೆಯಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ್ ತಂಗಡಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ದಲಿತ ವಿರೋಧಿ ನಡೆಯಿಂದ ತಮ್ಮ ಸ್ವಕ್ಷೇತ್ರವಾದ ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿ ದಲಿತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕನಕಗಿರಿ ತಾಲ್ಲೂಕು ಅಧಿಕಾರಿಗಳು, ಸ್ಥಳಿಯ ಗ್ರಾಮ ಪಂಚಾಯತ್ ವ ಅಧಿಕಾರಿಗಳು ಈ ನೆಲ ಕಾನೂನುಾನ್ನು ಗಾಳಿಗೆ ತೂರಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಒಂದು ಪಕ್ಷದ ಏಜಂಟರಂತೆ ಕೆಲಸ ಮಾಡುವುದನ್ನು ಖಂಡಿಸಿ, ಎಲ್ಲಾ ಸರ್ಕಾರಿ ಭೂಮಿಯನ್ನು ಅಕ್ರಮ ಒತ್ತುವರಿಯನ್ನು ತೆರವು ಗೊಳಿಸುವಂತೆ ಇಂದು ನವಲಿಯ ಮಾಕಣ್ಣ ಕಂಬಿ ಸರ್ಕಲ್ ಹತ್ತಿರ 48 ಗಂಟೆಗಳ ನಿರಂತರ ಅಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದಾರೆ.

ಈ ಕುರಿತು ನವಲಿ ಗ್ರಾಮದ ವೀರೇಶ್ ನಾಗವಂಶಿ ಮಾತನಾಡಿ, ‘ನವಲಿ ಗ್ರಾಮದಲ್ಲಿ ಸರ್ವೆ ನಂಬರ್ 258 ರಲ್ಲಿ ಸಚಿವರ ಹಿಂಬಾಲಕರೆ ಸರ್ಕಾರದ ಜಾಗ ಒತ್ತು ವರಿ ಮಾಡಿಕೊಂಡು ಅಕ್ರಮವಾಗಿ ವ್ಯಾಪರ ಮಳಿಗೆ ನಿರ್ಮಿಸಿ ಸ್ಥಳೀಯ ಪಂಚಾಯತಿ, ಸಂಬಂಧಪಟ್ಟ ಇಲಾ ಖೆಯಿಂದ ಪರವಾನಗಿ ಪಡೆಯದೆ ಬಾಡಿಗೆ ನೀಡುತ್ತಿದ್ದಾರೆ. ಸರ್ಕಾರಿ ಪ್ರೌಢ ಶಾಲೆಯ ಕಂಪೌಂಡ್ ಒತ್ತುವರಿ ಮಾಡಿಕೊಂಡು ಅಲ್ಲಿ ಕೂಡ ವ್ಯಾಪರ ಮಳಿಗೆ ನಿರ್ಮಿಸಿ ಬಾಡಿಗೆ ನೀಡು ತ್ತಿದ್ದಾರೆ ಅವಗಳನ್ನು ತೆರವುಗೊಳಿಸಿ ಎಂದು ಈಗಾಗಲೇ ಸಂಬಂಧಪಟ್ಟ ಹಿರಿಯ ಅಧಿಕಾರಿ ಗಳಿಗೆ ದೂರು ಸಲ್ಲಿಸಿದರೂ ಯಾವುದೆ ಕ್ರಮವಿಲ್ಲ’ ಎಂದು ಆರೋಪ ಮಾಡಿದ್ದಾರೆ.

ಇಲ್ಲಿರುವ ಅಧಿಕಾರಿಗಳು ಸಚಿವರ ಒತ್ತಡಕ್ಕೆ ಮಣಿದು, ನಮ್ಮಗೆ ಮಾತ್ರ ತೆರವು ಗೊಳಿಸುವಂತೆ ನೋಟಿಸ್ ನೀಡಿದ್ದು, ಇದ್ಯಾವ ನ್ಯಾಯ. ಕಾನೂನು ಪ್ರಕಾರ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ತೇರವುಗೊಳಿಸುವಂತೆ ಒತ್ತಾಯಿಸಿ 48 ಗಂಟೆಗಳ ನಿರಂತರ ಆಹೋರಾತ್ರಿ ಪ್ರತಿಭಟನಾ ಧರಣಿ ಯನ್ನು ಗ್ರಾಮಸ್ಥರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.

ತಾಲ್ಲೂಕಿನ ನವಲಿ ಗ್ರಾಮದ ದಲಿತ ಕೇರಿಯಲ್ಲಿ ಸುಮಾರು 35 ರಿಂದ 40 ದಲಿತ ಕುಟುಂಬಗಳು ವಾಸವಾಗಿದ್ದೇವೆ. ನಮ್ಮ ಹಿರಿಯರು ತಲಾ ತಲಾಂತರದಿಂದ ಇಲ್ಲೆ ವಾಸವಾಗಿದ್ದು, ಇದು ಮೂಲತಃ ಹ ಸರ್ಕಾರಿ ಜಾಗ ಇತ್ತಿಚ್ಚಿಗೆ ಕಂದಾಯ ಇಲಾಖೆಯ ಮೂಲ ದಾಖಲೆಗಳು ಪರಿಶೀಲಿಸದಾಗ ಇದ್ದಕ್ಕೆ ಯಾವುದೆ ಸರ್ವೆ ನಂಬರ್ ಇಲ್ಲ, ಹಳೆಯ ನಿಜಾಮರ ಕಾಲದ ಬಟ್ಟೆ ಮ್ಯಾಪ್ ನಲ್ಲಿ ಮಹಾರ್ ವಾಡಿ(ದುರ್ಬಲ ವರ್ಗ ದವರಿಗೆ ಮೀಸಲಾದ) ಜಾಗ ಇದೆ ಎಂದು ತಹಶೀಲ್ದಾರರು ಗುರುತ್ತಿಸಿರುತ್ತಾರೆ. ಹೀಗಾಗಿ ಈ ಜಾಗವು ಕಂದಾಯ ಇಲಾಖೆಗೆ ಒಳಪಡುವುದಿಲ್ಲ ಮತ್ತು ತಮಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ ಎಂದು ತಹಶೀಲ್ದಾರ ಇವರು ತಮ್ಮ ದಾಖಲೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

 

ಮುಂದುವರಿದು ತಮ್ಮ ಪತ್ರದ ಮೂಲಕ ಮಹಾರ್ ವಾಡಿ ಜಾಗವು ಪ್ರಸ್ತುತ ಗಾವಠಾಣಕ್ಕೆ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಎಂದು ತಿಳಿಸಿರುತ್ತಾರೆ. ಇದೇ ಜಾಗದಲ್ಲಿ ನಮ್ಮ ಕುಟುಂಬವು ವಾಸವಾಗಿದ್ದು. 35 ವರ್ಷ ಗಳಿಂದಲೂ ಗುಡಿಸಲು ಹಾಕಿ ಕೊಂಡು ಇಲ್ಲೆ ವಾಸವಾಗಿದ್ದಾರೆ. ಅನಕ್ಷರಸ್ಥರಾಗಿದ್ದರಿಂದ ಯಾವುದೇ ದಾಖಲೆಗಳನ್ನು ಹೊಂದಿಲ್ಲ ನಂತರದಲ್ಲಿ ನಾನು ಅಕ್ರಮ ಸಕ್ರಮ ಯೋಜನೇಡಿಯಲ್ಲಿ 94ಸಿ ಅನ್ವಯ ನಾವು ವಾಸವಿರುವ ಜಾಗಕ್ಕೆ ಹಕ್ಕುಪತ್ರ (ಈ ಮೊದಲು ಕಂದಾಯ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿದು) ನೀಡು ವಂತೆ ನಮ್ಮ ತಾಯಿಯ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದೇನೆ ಎಂದರು.

ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಹಕ್ಕು ಪತ್ರಗಳ ವನ್ನು ನೀಡಿರುವುದಿಲ್ಲ ಬಳಿಕ ಸ್ಥಳಿಯ ಗ್ರಾಮ ಪಂಚಾಯತಿಯಲ್ಲಿ ನಾವು ವಾಸವಿರುವ ಜಾಗವನ್ನು ತಮ್ಮ ಕಛೇರಿಯಲ್ಲಿ ನೋಂದಾಯಿಸಿಕೊಂಡು ಆಸ್ತಿ ನಂಬರ್ ಕೊಂಡುವಂತೆ ಅರ್ಜಿ ಸಲ್ಲಿದ್ದು, ಇದಕ್ಕೂ ಯಾವುದೇ ಸ್ಪಂದನೆ ಇಲ್ಲ.

ಇದೀಗ ನಮ್ಮ ಜಾಗದ ಪಕ್ಕದಲ್ಲಿರು ಸಮುದಾಯ ಭವನದ ಜಾಗವನ್ನು ಒತ್ತುವರಿ ಮಾಡಿದ್ದಿರಿ ಎಂದು ಸುಳ್ಳು ಆರೋಪಮಾಡಿ ರಾಜಕೀಯ ದುರುದ್ದೇಶ ಕಾರಣಕ್ಕಾಗಿ ನಾವು ಕಟ್ಟುವ ಮನೆಗೆ ಅಧಿಕಾರಿಗಳಿಂದ ಸಚಿವ ಶಿವರಾಜ್‌ ತಂಗಡಗಿಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮದ ದಲಿತ ಮುಖಂಡ ವೀರೇಶ್ ನಾಗವಂಶಿ ಆರೋಪ ಮಾಡಿದ್ದಾರೆ.

ಈ ವೇಳೆಯಲ್ಲಿ ಮುಖಂಡರಾದ ಲಿಂಗರಾಜ್ ನವಲಿ, ಅಲ್ಲಮ ಪ್ರಭು ಬೆಟ್ಟದೂರು, ಭೀಮನಗೌಡ ಹರ್ಲಾಪುರ್, ನಿಂಗಪ್ಪ ನಾಯಕ್. ನಾಗೇಶ್ ಪರಂಗಿ, ಕೆ. ಬಿ ಗೋನಾಳ್ ಹಾಗೂ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಇದ್ದರು.

Prajavikshane

Chandru R Bhanapaur

Leave a Reply

error: Content is protected !!