You are currently viewing BREAKING : ಒಡೆದ ತುಂಗಭದ್ರಾ ಕಾಲುವೆ; ಗದ್ದೆಗೆ ನುಗ್ಗಿದ ಅಪಾರ ಪ್ರಮಾಣದ ನೀರು..! 

BREAKING : ಒಡೆದ ತುಂಗಭದ್ರಾ ಕಾಲುವೆ; ಗದ್ದೆಗೆ ನುಗ್ಗಿದ ಅಪಾರ ಪ್ರಮಾಣದ ನೀರು..! 

BREAKING : ಒಡೆದ ತುಂಗಭದ್ರಾ ಕಾಲುವೆ; ಗದ್ದೆಗೆ ನುಗ್ಗಿದ ಅಪಾರ ಪ್ರಮಾಣದ ನೀರು..! 

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕೊಪ್ಪಳ ಮಾ.18 : ತುಂಗಭದ್ರಾ ಜಲಾಶಯದಿಂದ ರಾಯಚೂರಿಗೆ ನೀರು ಸರಬರಾಜು ಮಾಡುವ ಎಡದಂಡೆ ಕಾಲುವೆಯು ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಹೊಲಗದ್ದೆಗಳಿಗೆ ನುಗ್ಗಿದೆ.

ತಾಲೂಕಿನ ಬಸಾಪುರ ಹಾಗೂ ಬಂಡಿ ಹರ್ಲಾಪುರ ಗ್ರಾಮಗಳ ಹತ್ತಿರ ಇರುವ ತುಂಗಭದ್ರಾ ಎಡದಂಡೆ ಕಾಲುವೆಯ 13ನೇ ಮೈಲಿಯಲ್ಲಿ ಕಾಲುವೆ ಒಡೆದ ಘಟನೆ ಮಂಗಳವಾರ ತಡರಾತ್ರಿ ಜರುಗಿದ್ದು. ಸುಮಾರು 60 ಅಡಿಗಳಷ್ಟು ಕಾಲುವೆ ಕಟ್ಟಿ ಹೋಗಿದ್ದು ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ರಾಯಚೂರು ಜಿಲ್ಲೆಗೆ ಬೇಸಿಗೆಯ ನಿಮಿತ್ತ ಕುಡಿಯುವ ನೀರಿನ ಉದ್ದೇಶದಿಂದ ಎಡದಂಡೆ ಕಾಲುವೆ ಮುಖಾಂತರ ತುಂಗಭದ್ರಾ ಜಲಾಶಯದಿಂದ ನೀರು ಪೂರೈಕೆ ಮಾಡಲು ಮಾರ್ಚ್ 16 ರಿಂದ ನಿರಂತರವಾಗಿ 27ರ ವರೆಗಿನ ಅವಧಿಯಲ್ಲಿ 20 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.

ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದ ಪರಿಣಾಮವಾಗಿ ಈ ಘಟನೆ ಸಂಭವಿಸಿದ್ದು ಕಠಾವಿಗೆ ಬಂದಿದ್ದ ಬೆಳೆಗೆ ನೀರು ನುಗ್ಗಿದ್ದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು ಪರಿಹಾರವನ್ನು ನೀಡಬೇಕೆಂದು ರೈತರು ಒತ್ತಾಯಿಸಿರುತ್ತಾರೆ.

Leave a Reply

error: Content is protected !!