ಮುದಗಲ್ಲ :-ಯುಗಾದಿ–ರಂಜಾನ್: ಶಾಂತಿ ಕಾಪಾಡಲು ಪಿ.ಎಸ್.ಐ ವೆಂಕಟೇಶ್ ಮಾಡಗೇರಿ ಮನವಿ…

ಮುದಗಲ್ಲ :-ಯುಗಾದಿ–ರಂಜಾನ್: ಶಾಂತಿ ಕಾಪಾಡಲು ಪಿ.ಎಸ್.ಐ ವೆಂಕಟೇಶ್ ಮಾಡಗೇರಿ ಮನವಿ…

ಮುದಗಲ್ಲ :- ಹಿಂದೂಗಳಾಗಲಿ- ಮುಸ್ಲಿಮರಾಗಲಿ; ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಯುಗಾದಿ ಮತ್ತು ಈದ್–ಉಲ್–ಫಿತರ್ ಹಬ್ಬವನ್ನು ಆಚರಿಸಿ’ ಎಂದು ಮುದಗಲ್ಲ ಪೋಲಿಸ್ ಠಾಣೆಯ ಪಿ.ಎಸ್ ಐ ವೆಂಕಟೇಶ್ ಮಾಡಗೇರಿ ಮನವಿ ಮಾಡಿದರು.

ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಈದ್–ಉಲ್–ಫಿತರ್ ಹಾಗೂ ಯುಗಾದಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋಮು ಸೌಹಾರ್ದತೆಗೆ ಐತಿಹಾಸಿಕ ಮುದಗಲ್ಲ ಪಟ್ಟಣವು ರಾಜ್ಯದಲ್ಲಿಯೇ ಮಾದರಿಯಾಗಿದೆ. ಆದ್ದರಿಂದ ಹಿಂದೂ ಹಾಗೂ ಮುಸ್ಲಿಂ ಬಾಂಧವರು ವದಂತಿಗಳಿಗೆ ಕಿವಿಗೊಡದೆ, ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಿ ಸ್ಪಂದಿಸಬೇಕು. ಯಾವುದೇ ಸಂದರ್ಭದಲ್ಲಿಯೂ ಕಾನೂನನ್ನು ಕೈಗೆತ್ತಿಕೊಳ್ಳದೆ ವಿಷಯವನ್ನು ಪೊಲೀಸರಿಗೆ ತಿಳಿಸಬೇಕು. ಸಮಾಜದ ಶಾಂತಿಯ ಸುವ್ಯವಸ್ಥೆಯನ್ನು ಕದಡುವ ಕಿಡಿಗೇಡಿಗಳ ಬಗ್ಗೆ ಎಚ್ಚರದಿಂದಿದ್ದು ಅಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಐತಿಹಾಸಿಕ ಮುದಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಕಹಿ ಘಟನೆಗಳಿಗೆ ಅವಕಾಶ ಮಾಡಿಕೊಡದೆ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಹಬ್ಬಗಳನ್ನು ಆಚರಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಸಮಾಜದ ಮುಖಂಡರು ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಗುರು ಬಸಪ್ಪ ಸಜ್ಜನ್,ಹಾಗೂ ಜಮೀರ್ ಅಹಮದ್ ಖಾಜಿ ,ಅಮೀರ್ ಬೇಗ್ ಉಸ್ತಾದ್, ಗುಂಡಪ್ಪ ಗಂಗಾವತಿ,ಅಜ್ಮೀರ್ ಬೆಳ್ಳಿಕಟ್,ನ್ಯಾಮತುಲ್ಲಾ ಖಾದ್ರಿ, ಶಿವಗ್ಯಾನಪ್ಪ, ನಾಗರಾಜ ತಳವಾರ, ವೆಂಕಟೇಶ ಹಿರೇಮನಿ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಕೃಷ್ಣ ಚಲುವಾದಿ, ಹುಲಗಪ್ಪ ಚಲುವಾದಿ,  ಸಂಜು ಛಲುವಾದಿ, ಮಹಾಂತೇಶ ಭೋವಿ ಇದ್ದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!