ಮುದಗಲ್ಲ ವರದಿ
ಭಕ್ತಿಭಾವದೊಂದಿಗೆ ಅಯ್ಯಪ್ಪ ಸ್ವಾಮಿ 10 ನೇ ವಷ೯ದ ಮಂಡಲ ಪೂಜೆ, ಕುಂಭ ಮೆರವಣಿಗೆ ನಡೆಯಿತು..

ಮುದಗಲ್ಲ :- ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವ
‘ಸ್ಥಾನದ 10ನೇ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆ
ಅಂಗವಾಗಿ ಮಾಲಾಧಾರಿಗಳಿಂದ ಭಕ್ತಿಭಾವ ಪೂರ್ಣವಾಗಿ
ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಹಾಗೂ ಮಹಿಳೆಯರಿಂದ ಕುಂಭಗಳ ಭವ್ಯ ಮೆರವಣಿಗೆ ನಡೆಸಲಾಯಿತು.

ಹಳೆಯ ಪೇಟೆಯ ಅಯ್ಯಪ್ಪ ದೇವಸ್ಥಾನ ದಲ್ಲಿ ಸುಪ್ರಭಾತ ದೊಂದಿಗೆ ಆರಂಭ ಗೊಂಡ ಪೂಜಾ ಕೈಂಕರ್ಯ ಗಳಲ್ಲಿ ನೈರ್ಮಲ್ಯ ದರ್ಶನಂ,ಮಹಾಗಣಪತಿ ಹೋಮ, ಅಯ್ಯಪ್ಪಸ್ವಾಮಿ ಮೂರ್ತಿ ಸೇರಿದಂತೆ ದೇವಸ್ಥಾನದ ಉಪದೇವತೆಗಳಿಗೆ ಕಳಸಾಭಿಷೇಕ ನೆರವೇರಿ ಸಲಾಯಿತು.
ನಂತರ ಹಳೆಯ ಪೇಟೆಯಲ್ಲಿ ಇರುವ ದೇವಸ್ಥಾನದಲ್ಲಿ ಅಲಂಕೃತಘೋಷ, ಶರಣು ಶರಣಯ್ಯಪ್ಪ ವಾಹನದಲ್ಲಿ ಅಯ್ಯಪ್ಪಸ್ವಾಮಿ ಎಂಬ ನಾಮಸ್ಮರಣೆಯೊಂದಿಗೆ ಮೂತಿ೯ ಪ್ರತಿಷ್ಠಾಪಿಸಿ, ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತಿಮಯ ಕರ್ಪೂರದಾರತಿ ಬೆಳಗುತ್ತ ವರಣದಿಂದ ಕಂಗೊಳಿಸಿತು.
ಮೂರ್ತಿಯೊಂದಿಗೆ ಮೆರವಣಿಗೆ ಚಾಲನೆ ನೀಡಲಾಯಿತು. ಅನ್ನಸಂತರ್ಪಣೆ ನೆರವೇರಿಸದ ನಂತರ ಹಳೆಯ ಪೇಟೆಯ ಅಯ್ಯಪ್ಪ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪೋಲಿಸ್ ಠಾಣೆಯ ಮುಖಾಂತರ ಚೌಡಿಕಟ್ಟಿ
ಮಾರ್ಗವಾಗಿ ಸಂಚರಿಸಿ ಕಿಲ್ಲಾದ ರಾಮಲಿಂಗೇಶ್ವರ ದೇವಸ್ಥಾನಕ್ಕೆ
ತಲುಪಿತು, ಸಂಜೆ ದೀಪಾರಾಧನೆ, ಅಯ್ಯಪ್ಪಸ್ವಾಮಿ 10ನೇ ವಷ೯ದ ಮೇಟ್ಟಿಲು ಪಡಿ ಪೂಜೆ,ಪುಷ್ಪಾಭಿಷೇಕ ಹಾಗೂ ಪಾನಕ
ನೈವೇದ್ಯ ಅರ್ಪಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳು
ಸಂಪನ್ನಗೊಂಡವು.

ಈ ಸಂದರ್ಭದಲ್ಲಿ ಗಂಗಾವತಿ ಮಂಜುನಾಥ ಹಾಗೂ ಮುದಗಲ್ ಅಮರೇಶ ಗುರುಸ್ವಾಮಿಗಳ ನೇತ್ರತ್ವದಲ್ಲಿ ಸಾಯಂಕಾಲ ಅಯ್ಯಪ್ಪಸ್ವಾಮಿ ಮೆಟ್ಟಿಲು ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಭಕ್ತರಿಗಾಗಿ ಅನ್ನಸಂತರ್ಪಣೆ ಜರುಗಿತ್ತು
ಪೂಜಾ ಗುರುಸ್ವಾಮಿ ನೇತೃತ್ವದಲ್ಲಿ, ಸಹಕಾರದೊಂದಿಗೆ ಪೂಜಾ
ವಿಧಿವಿಧಾನಗಳು ನಡೆದವು.

ಈ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ಪೂಜಾ ಕಾರ್ಯಕ್ರಮದಲ್ಲಿ ಅಯ್ಯಪ್ಪ ಮಾಲಾಧಾರಿ ಗುರುಸ್ವಾಮಿಗಳು ವಿಠೋಬ ಯಾಳಗಿ,ಕಾಂತಕುಮಾರ ಪತ್ತಾರ, ವಿರೇಶ, ಸಿದ್ದಾಮಪ್ಪ, ಗೋಪಾಲಕೃಷ್ಣ, ರಾಘವೇಂದ್ರ, ವಿರೇಶ,ಶಿವರಾಜ TMC, ಅಮೀನಗಡ,ನಾಗರಾಳ, ಖೈರವಾಡಗಿ, ಗುರುಗುಂಟ, ಹೊಸೂರು ಗುರುಸ್ವಾಮಿಗಳು ಸೇರಿದಂತೆ ಸಕಲ ಭಕ್ತಾಧಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ ಸಮಿತಿ ಟ್ರಸ್ಟ್ ಸೇರಿದಂತೆ ಸಮಿತಿ ಸದಸ್ಯರು ಹಾಗೂ ನೂರಾರು.ಭಕ್ತರು ಭಾಗವಹಿಸಿದ್ದರು.
ವರದಿ:- ಮಂಜುನಾಥ ಕುಂಬಾರ