ಮುದಗಲ್ಲ ವರದಿ..
ಮುದಗಲ್ಲ :- ಮೂಲದಲ್ಲೇ ಕಸ ವಿಂಗಡಣೆ: ಮನೆಗಳಿಗೆ ಬಕೆಟ್ ವಿತರಣೆ..
ಮುದಗಲ್ಲ :- ಮೂಲದಲ್ಲೇ ಕಸ ವಿಂಗಡಿಸಿ ಸಂಗ್ರಹಿಸುವ ಉದ್ದೇಶದಿಂದ ಪಟ್ಟಣದಲ್ಲಿರುವ ಮನೆಗಳಿಗೆ ತಲಾ ಎರಡು ಕಸ ಸಂಗ್ರಹಣೆ ಬಕೆಟ್‌ಗಳನ್ನು ಪಟ್ಟಣದ ಹಳೆಪೇಟೆಯ ಮನೆಗಳಿಗೆ ಕಸ ಸಂಗ್ರಹಿಸಲು ಬಕೆಟ್‌ಗಳನ್ನು ಪುರಸಭೆಯ ಕಿರಿಯ ನೈಮಲ್ಯ ಅಧಿಕಾರಿ ರೈಮತ್ ಹುನ್ನಿಸಾ ಬೇಗಂ ಪುರಸಭೆಯ ಸಮುದಾಯ ಸಂಘಟಕರಾದ ಚನಮ್ಮ ದಳವಾಯಿ ಹಿರೇಮಠ ಅವರು ವಿತರಣೆ ಮಾಡಿದರು
ಮೂಲದಲ್ಲೇ ಕಸ ವಿಂಗಡಿಸಿ ಸಂಗ್ರಹಿಸುವ ಉದ್ದೇಶದಿಂದ ಪಟ್ಟಣದಲ್ಲಿರುವ ಮನೆಗಳಿಗೆ ತಲಾ ಎರಡು ಕಸ ಸಂಗ್ರಹಣೆ ಬಕೆಟ್‌ಗಳನ್ನು ನೀಡುವ ಕಾರ್ಯಕ್ಕೆ ನೈಮಲ್ಯ ಅಧಿಕಾರಿ ರೈಮತ್ ಹುನ್ನಿಸಾ ಚಾಲನೆ ನೀಡಿದರು.
‘ಪಟ್ಟಣದಲ್ಲಿ ನೈರ್ಮಲ್ಯ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಅನುಕೂಲವಾಗುವಂತೆ ಪ್ರತಿ ಮನೆಗೆ ಎರಡು ಬಕೆಟ್‌ಗಳನ್ನು ನೀಡಲಾಗುತ್ತಿದೆ’ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಪೌರ ಕಾರ್ಮಿಕರು ಉಪಸ್ಥಿತರಿದ್ದರು..
ವರದಿ:-ಮಂಜುನಾಥ ಕುಂಬಾರ