ಮುದಗಲ್ಲ:- ವಿವಿಧೆಡೆ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ದಿನಾಚರಣೆ..

ಮುದಗಲ್ಲ ವರದಿ..

ಮುದಗಲ್ಲ ನಲ್ಲಿ ವಿವಿಧೆಡೆ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ದಿನಾಚರಣೆ..

ಮುದಗಲ್ : ಪಟ್ಟಣದ ಪುರಸಭೆ ಕಾರ್ಯಾಲಯ, ನಾಡ ಕಚೇರಿ, ಪೊಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಎಂ.ಗಂಗಣ್ಣ ಕಾಲೇಜು, ಸೇರಿದಂತೆ ವಿವಿಧಡೆ ಕಲ್ಯಾಣ ಕರ್ನಾಟಕ ವಿಮೋಚನಾ ಉತ್ಸವ ದಿನಾಚರಣೆ ಸಡಗರ ಸಂಭ್ರಮದಿಂದ ಮಾಡಿದರು.

ಸರ್ದಾರ ವಲ್ಲಭಭಾಯಿ ಪಾಟೀಲ್ ಮಹಾತ್ಮ ಗಾಂಧೀಜಿ, ಡಾ:ಬಿ, ಆರ್, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುರಸಭೆ ಯ ಅಧ್ಯಕ್ಷ ರಾದ ಮಹಾದೇವಮ್ಮ ನರಸಯ್ಯ ಗುತ್ತೆದಾರ್,ನಾಡ ಕಚೇರಿಯಲ್ಲಿ ಉಪತಹಶೀಲ್ದಾರ ತುಳಜಾರಮ ಸಿಂಗ್,ಪೋಲಿಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ, ಎಂ, ಕೃಷಿ ಅಧಿಕಾರಿ ಮಹಾಂತಯ್ಯ  ರವರು ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಉಪಾಧ್ಯಕ್ಷ ರಾದ
ಅಜ್ಮಿರ್ ಬೆಳ್ಳಿಕಟ್, ಕರಿಯಪ್ಪ ಯಾದವ್ , ಗುಂಡಪ್ಪ ಗಂಗಾವತಿ , ತಸ್ಲೀಂ ಮುಲ್ಲಾ , ತಮ್ಮಣ್ಣ ಗುತ್ತಿಗೆದಾರ, ಶಿವ ಗ್ಯಾನಪ್ಪ ನಾಗರಾಜ  ತಳವಾರ, ಶಂಕಪ್ಪ ಜೀಡಿ ,ಮೈಬುಸಾಬ ಬಾರಿಗಿಡ, ಹುಸೇನ್ ಅಲಿ ,ಅಶೋಕ್ ಗೌಡ ಪಾಟೀಲ್ , ಬಸವರಾಜ ಬಂಕದಮನೆ, ಹಾಗೂ ಪುರಸಭೆ ಸಿಬ್ಬಂದಿಗಳು, ಗ್ರಾಮಲೆಕ್ಕಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ರೈತ ಸಂಪರ್ಕ ಕೇಂದ್ರದ, ಸಿಬ್ಬಂದಿಗಳು, ಸಮುದಾಯದ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪ್ರಥಮ ದರ್ಜೆ ಕಾಲೇಜ್ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!