Post Views: 162
ಮುದಗಲ್ಲ ವರದಿ…
ಮುದಗಲ್ಲ :- ಟ್ರಾಫಿಕ್ ಸಮಸ್ಯೆ: ಸಂಚಾರಕ್ಕೆ ತೊಂದರೆ…

ಮುದಗಲ್ಲ ದಿಂದ ಮಸ್ಕಿಗೇ ಹೋಗುವ ದಾರಿಯಲ್ಲಿ ಹಾಗೂ ಸಂತೆ ಹೋಗುವ ದಾರಿ ಯಲ್ಲಿ ಇಲ್ಲದ ಟ್ರಾಫಿಕ್ ಗೋಳು
ಮುದಗಲ್ಲ :- ಹೌದು, ಮುದಗಲ್ಲ ಮಸ್ಕಿ ಹೋಗುವ ಹಾಗೂ ಸಂತೆಗೆ ಹೋಗುವ ರಸ್ತೆ ಯು ಟ್ರಾಫಿಕ್ ಸಮಸ್ಯೆ ಜನರಿಗೆ ಅಷ್ಟೊಂದು ಬೇಸರ ಮೂಡಿಸಿದೆ. ಇದು ಒಂದು ದಿನದ ಮಾತಲ್ಲ. ನಿತ್ಯವೂ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯವಾಗಿದೆ
ಮುದಗಲ್ಲಿನ ಪುರಸಭೆ ಹಾಗೂ ಪೊಲೀಸರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹರಸಾಹಸ ಪಡುತ್ತಲೇ ಇದ್ದಾರೆ. ಆದರೆ ಪೂರ್ಣ ಪ್ರಮಾಣದ ಪರಿಹಾರ ಮಾತ್ರ ಈವರೆಗೂ ಸಿಕ್ಕಿಲ್ಲ.

ಈ ರಸ್ತಯಿಂದ ವ್ಯಾಪಾರಸ್ಥರಿಗೆ ಕಾಲುನಡೆಗೆಯವರಿಗೆ ತುಂಬಾ ಸಮಸ್ಯೆ ಯಾಗಿದೆ ಇಲ್ಲಿ ಸಿಸಿ ರಸ್ತೆ ಯು ಅವೈಜ್ಞಾನಿಕ ವಾಗಿದೆ ಎಂಬುವುದ ಸವ೯ಜನಿಕರ ವಾದ ದೊಡ್ಡ ಪ್ರಮಾಣದ ವಾಹಗಳು ಇ ರಸ್ತೆಯಲ್ಲಿ ಹೋಗುತ್ತಿರುವುದು ಇ ಸಮಸ್ಯೆ ಕಾರಣವಾಗಿದೆ ಎಂದು ವ್ಯಾಪರಸ್ಥರ ಹಾಗೂ ಸ್ಥಳೀಯರ ವಾದ ಈ ಸಮಸ್ಯೆ ಪರಿಹಾರ ಕೈಗೋಳಬೇಕು ಹಾಗೂ ದೊಡ್ಡ ಪ್ರಮಾಣದ ವಾಹನ ಸಂಚಾರ ಇ ರಸ್ತೆಯಲ್ಲಿ ತಡೆಯಬೇಕು ಎಂದು ಸವ೯ಜನಿಕರ ಅಭಿಪ್ರಾಯ.

ಮುದಗಲ್ಲ ಪಟ್ಟಣದಲ್ಲಿ ಮಸ್ಕಿ ಹೋಗುವ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹಾಗೂ ಖಾಸಗಿ ವಾಹನ ಸಂಚಾರ ಹೆಚ್ಚಾಗುತ್ತಿದ್ದರಿಂದ ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನ ಸವಾರರು ತೊಂದರೆ ಪಡುತ್ತಿದ್ದಾರೆ.
ಇಲ್ಲಿನ ಬಸ್ ನಿಲ್ದಾಣದ ಬಸ್ ಗಳು ಮಸ್ಕಿ ಗೆ ಹೋಗಲು ಇದೆ ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ಅಧಿಕವಾಗಿ ಟ್ರಾಫಿಕ್ ಉಂಟಾಗುತ್ತದೆ ಹಾಗೂ ಖಾಸಗಿ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಿದ್ದರಿಂದ ಬಸ್‌ಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಬಹುತೇಕ ಖಾಸಗಿ ವಾಹನಗಳು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಿವೆ ಎಂದು ಸವ೯ಜನಿಕರು ಆರೋಪಿಸಿದ್ದಾರೆ. ಮುದಗಲ್ಲ ನ ಪ್ರತಿ ಸೋಮವಾರ ಸಂತೆ ನಡೆಯುತ್ತಿರುವ ಕಾರಣ ಪಟ್ಟಣದಲ್ಲಿ ಹೆಚ್ಚಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ.
ಖಾಸಗಿ ವಾಹನಗಳ ಚಾಲಕರು ಮತ್ತು ಮಾಲೀಕರು ಪ್ರಯಾಣಿಕರನ್ನು ವಾಹನದಲ್ಲಿ ಕರೆದುಕೊಂಡು ಹೋಗುವುದಕ್ಕೆ ರಸ್ತೆಯ ನಡು ಜಾಗದಲ್ಲಿ ನಿಂತು ಹರಸಾಹಸ ಪಡುತ್ತಿದ್ದರೂ ಸ್ಥಳೀಯ ಪುರಸಭೆ ಹಾಗೂ ಪೊಲೀಸರು ಮಾತ್ರ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.
ಸಮಸ್ಯೆ ಅರಿತು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಸವ೯ಜನಿಕರು ಪತ್ರಿಕೆ ಮುಖಾಂತರ ಒತ್ತಾಯಿಸಿದ್ದಾರೆ.
ವರದಿ:- ಮಂಜುನಾಥ ಕುಂಬಾರ..