ಮುದಗಲ್ಲ :- ಪುರಸಭೆ ವ್ಯಾಪ್ತಿಯಲ್ಲಿ ಕಳೆದ 10–15 ದಿನಗಳಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಜನತೆ ಹೈರಾಣಾಗಿದ್ದಾರೆ.
23 ವಾರ್ಡ್‌ಗಳಿದ್ದು, ಕೆಲವು ವಾರ್ಡ್‌ಗಳಲ್ಲಿ ಮಾತ್ರ ಸ್ವಚ್ಛತೆ ಕಾಪಾಡಲಾಗಿದೆ. ಇನ್ನೂ ಕೆಲವು ವಾರ್ಡ್‌ಗಳಲ್ಲಿ ರಸ್ತೆಗಳ ಮೇಲೆ ನೀರು ನಿಂತಿವೆ ಇದರಿಂದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದು, ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗಿವೆ.
ಪ್ರತಿದಿನ ಸಂಜೆ 6 ಗಂಟೆ ಒಳಗೆ ಮನೆಯ ಬಾಗಿಲು ಹಾಕದಿದ್ದರೆ ಸೊಳ್ಳೆಗಳ ಹಿಂಡು ಮನೆಯೊಳಗೆ ದಾಳಿ ಮಾಡುತ್ತವೆ. ಇದರಿಂದ ಸೊಳ್ಳೆ ಕಚ್ಚಿದರೆ ವಿಪರೀತ ತುರಿಕೆ ಇದ್ದು, ಸಾಂಕ್ರಾಮಿಕ ರೋಗಗಳಿಗೆ ಹೆದರುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ನಗರ ನಿವಾಸಿ ರಾಮಣ್ಣ ಬಂಕದಮನೆ
ಚಳಿಗಾಲ ಮುಗಿದು, ಬೇಸಿಗೆ ಆರಂಭ ಆಗುವುದರಿಂದ ಅಲ್ಲಲ್ಲಿ ನಿಂತಿರುವ ನೀರಿನಲ್ಲಿ ಸೊಳ್ಳೆ ಉತ್ಪಾದನೆಯಾಗುತ್ತವೆ. ಇದರಿಂದ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ವೈದ್ಯರು ಹೇಳುವ ಮಾತಾಗಿದೆ
ಸಾರ್ವಜನಿಕ ಸ್ಥಳದಲ್ಲಿ ಹೆಚ್ಚು:
ಪ್ರತಿದಿನ ಸಾವಿರಾರು ಜನ ಸೇರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಬಸ್,ಕಾಯುವ ಪ್ರಯಾಣಿಕರಿಗೆ ಸೊಳ್ಳೆ ಕಚ್ಚುವುದು ಸಾಮಾನ್ಯವಾಗಿದೆ. ಸ್ಲಂ ಏರಿಯಾ ಎಂದು ಘೋಷಣೆ ಯಾದ ಏರಿಯಾಗಳಲ್ಲಿನ ಜನರ ಪಾಡು ಕೇಳುವಂತಿಲ್ಲ. ಯಾವುದೇ ಸೌಲಭ್ಯಗಳಿಲ್ಲ. ಸಮಸ್ಯೆಗಳೇ ಹೆಚ್ಚಿರುವ ಇಲ್ಲಿ ಸೊಳ್ಳೆ, ಹುಳುಗಳ ಕಾಟ ಹೆಚ್ಚಾಗಿದೆ.ಕೂಡಲೇ ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು ಎನ್ನುವುದು ಪಟ್ಟಣದ ನಿವಾಸಿಗಳ ಆಗ್ರಹವಾಗಿದೆ.
ಸೊಳ್ಳೆಗಳು ಹೆಚ್ಚು ಆಗಿದ್ದು ಜನತೆ ರೋಗ ರುಜನಿಗಳಿಗೆ ತುತ್ತಾಗುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಜನಪ್ರತಿನಿಧಿಗಳು ಅಧಿಕಾರಿಗಳು ಕಣ್ಣುಚ್ಚಿ ಕುಳಿತುಕೊಂಡಿದ್ದಾರೆ
ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರಾದ ಶರಣಪ್ಪ
ಕಟ್ಟಿಮನೆ ಮುದಗಲ್ಲ ನಿವಾಸಿ
ಬೇಸಿಗೆ ಆರಂಭವಾಗುವ ಮುನ್ನ ಸೊಳ್ಳೆಗಳ ಉತ್ಪಾದನೆ ಜಾಸ್ತಿಯಾಗುತ್ತದೆ. ಅಲ್ಲಲ್ಲಿ ನೀರು ನಿಂತಿರುವ ಪರಿಣಾಮ ಸೊಳ್ಳೆಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಎಲ್ಲೆಡೆ ಸ್ವಚ್ಛತೆ ಆದಷ್ಟು ಬೇಗನೆ ಕಾಪಾಡಬೇಕು ಹಾಗೂ ಬ್ಲಿಚಿಂಗ್ ಪೌಡರ್ ಮತ್ತು ಫಾಗಿಂಗ್ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಯ ಮುದಗಲ್ಲ ಅಧ್ಯಕ್ಷ ರಾದ ಬಸವರಾಜ ಬಂಕದಮನೆ