ಪ್ರಜಾ ವೀಕ್ಷಣೆ ಸುದ್ದಿ :
FLASH NEWS : ಸಿಜಿಕೆ ಮಹಾ ರಂಗಪರಂಪರೆಯ ಮಹಾನ್ ಚೇತನ : ಕೆ.ವಿ.ನಾಗರಾಜಮೂರ್ತಿ
ಕೊಪ್ಪಳ : “‘ಸಿಜಿಕೆ’ ಎಂದರೆ ಅದೊಂದು ಮಹಾ ರಂಗಪರಂಪರೆಯ ಮಹಾನ್ ಚೇತನ. ಸಿ.ಜಿ. ಕೃಷ್ಣಸ್ವಾಮಿಯವರು ತನ್ನ ಸುತ್ತಲಿನವರನ್ನು ಹಾಗೂ ಒಟ್ಟು ಸಮಾಜವನ್ನು ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಮನೋಭಾವನೆಯ ರಂಗ ಚಟುವಟಿಕೆಗಳ ಮೂಲಕ ಪ್ರಭಾವಿಸಿದ ರಂಗ ಚೇತನ, ದೇಶದ ಆಯಾ ಸಂದರ್ಭದಲ್ಲಿ ಎದುರಿಸುವ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ರಂಗ ಬದ್ಧತೆಯೊಂದಿಗೆ ದಿಟ್ಟತನದಿಂದ ಮೆರೆದ ಮಹಾ ಜಗಜಟ್ಟಿ ಮಲ್ಲ” ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು.
ಭಾನಾಪುರ-ತಳಕಲ್ ಗ್ರಾಮದಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದ ಸಭಾಂಗಣಲ್ಲಿ ಇಂದು ಕರ್ನಾಟಕ ಬೀದಿನಾಟಕ ಅಕಾಡೆಮಿ, ಬೆಂಗಳೂರು , ಕವಿಸಮೂಹ, ಸೇವಾ & ಡೇವ್ಸ್ ಸಂಸ್ಥೆ, ಕೊಪ್ಪಳ ಬಹುತ್ವ ಬಳಗ ಕೊಪ್ಪಳ, ಇವರ ಸಂಯುಕ್ತ ಆಶ್ರಯದಲ್ಲಿ “ಸಿಜಿಕೆ ಬೀದಿರಂಗ ದಿನ ಆಚರಣೆ” ಕೊಪ್ಪಳ ಜಿಲ್ಲೆಯ ರಂಗಕರ್ಮಿಗಳಿಗೆ :- ಸಿಜಿಕೆ ರಂಗ ಪುರಸ್ಕಾರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ವಿ.ನಾಗರಾಜಮೂರ್ತಿಯವರು, ‘ ಸಿಜಿಕೆ ಅವರು ಶಾಸ್ವತವಾಗಿ ಅಂಗವೈಫಲ್ಯವನ್ನು ಅನುಭವಿಸುತ್ತಿದ್ದರೂ, ಒಂದು ಕಾಲಿನಲ್ಲಿಯೇ ಇಡೀ ವಿಶ್ವವೇ ಮೆಚ್ಚುವಂತ ಕೇಲಸ ಮಾಡಿದರು. ಕರ್ನಾಟಕದಲ್ಲಿ ಬಂಡಾಯ ಸಾಹಿತ್ಯ, ದಲಿತ ಸಂಘರ್ಷ ಸಮಿತಿ ಕಟ್ಟುವಲ್ಲಿ ಬಹುಮುಖ್ಯ ಪಾತ್ರ ಹಾಗೂ ಅನೇಕ ಜನಪರ ಹೋರಾಟಗಳನ್ನು ನಿರೂಪಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಅಂದಿನ ರಂಗಭೂಮಿ ಕೇವಲ ಪೌರಾಣಿಕ, ವೃತ್ತಿ ರಂಗಭೂಮಿಯಲ್ಲಿಯೇ ಇದ್ದ ಕನ್ನಡ ರಂಗಭೂಮಿಯ ದಿಕ್ಕನ್ನೇ ಬದಲಿಸಿ ಹೊಸ ಆಯಾಮವನ್ನು ಕೊಟ್ಟ ಮಹಾನ್ ರಂಗಕರ್ಮಿ ಸಿಜಿಕೆಯಾಗಿದ್ದರು ಎಂದು ತಿಳಿಸಿದರು.
