ಕುಕನೂರು : ಇತ್ತೀಚಿಗೆ ಸರ್ಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಮಾತ್ರ ತಮ್ಮ ಕಾರ್ಯಾಲಯಗಳಲ್ಲಿ ಮಹನೀಯರ ಜಯಂತಿ ಆಚರಣೆ ಮಾಡುತ್ತಿದ್ದು ರಚನೆಯ ಸಂಗತಿಯಾಗಿದ್ದು ಕಟಾಚಾರಕ್ಕೆ ಜಯಂತಿ ಆಚರಣೆ ಮಾಡುವ ಬದಲು ಶ್ರದ್ಧಾಭಕ್ತಿಯಿಂದ ಮಹನೀಯರ ಜಯಂತಿಯನ್ನು ಆಚರಣೆ ಮಾಡಿ ಎಂದು ದಲಿತ ಮುಖಂಡ ಮಹೇಶ ದೊಡ್ಮನಿ ಹೇಳಿದರು.
ಪಟ್ಟಣದ ಪ್ರವಾಸಿ ಹೊಂದಿರದಲ್ಲಿ ಆಯೋಜಿಸಿದ್ದ ಬಾಬು ಜಗಜೀವನ್ ರಾಮ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಹೇಶ ದೊಡ್ಮನಿ ಮಾತನಾಡುತ್ತ ಎಲ್ಲಾ ಮಹನೀಯರ ಕೊಡುಗೆಗಳು ಈ ನಾಡಿಗೆ ಮಹತ್ವದ್ದಾಗಿದ್ದು ಅವರಿಗೆ ಗೌರವ ನೀಡುವ ರೂಪದಲ್ಲಿ ಜಯಂತಿ ಆಚರಣೆಗೆ ಸರ್ಕಾರ ಆದೇಶ ಮಾಡುತ್ತದೆ ಆದರೆ ಕೆಲ ಸರ್ಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಜಯಂತಿ ಆಚರಣೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು ಅದರ ಬದಲಿಗೆ ಮಹನೀಯರ ಬಗ್ಗೆ ಸಂಪೂರ್ಣ ತಿಳಿದುಕೊಂಡು ಅವರ ಬಗ್ಗೆ ಮಾಹಿತಿ ನೀಡಿ ಅರ್ಥಪೂರ್ಣ ಜಯಂತಿ ಮಾಡಬೇಕೆಂದು ಹೇಳಿದರು.
ಸಭೆಯಲ್ಲಿ ಏಪ್ರಿಲ್ 5 ರಂದು ಬಾಬು ಜಗಜೀವನ್ ರಾಮ್ ಅವರ ಹಾಗೂ ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಸಾಂಕೇತಿಕವಾಗಿ ಎಲ್ಲಾ ಶಾಲಾ ಕಾಲೇಜು ಹಾಗು ಸರ್ಕಾರಿ ಕಾರ್ಯಾಲಯಗಳಲ್ಲಿ ಸಾಂಕೇತಿಕವಾಗಿ ಆಚರಿಸಿ ತಾಲೂಕ ಮಟ್ಟದ ಜಯಂತಿ ಆಚರಣೆಯನ್ನು ಏಪ್ರಿಲ್ 19 ರಂದು ಅರ್ಥಪೂರ್ಣವಾಗಿ ತಾಲೂಕ ಕೇಂದ್ರದಲ್ಲಿ ಆಚರಿಸಲು ನಿರ್ಧರಿಸಲಾಯಿತು. ಮತ್ತು ಆ ದಿನ ಪಟ್ಟಣದಲ್ಲಿ ಬಾಬು ಜಗಜೀವನ್ ರಾಮ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬೃಹತ್ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಅಂಬೇಡ್ಕರ್ ವೃತ್ತದ ಬಳಿ ವೇದಿಕೆ ಕಾರ್ಯಕ್ರಮ ಆಯೋಜಿಸಿ ಇಬ್ಬರು ಮಹನೀಯರ ಕುರಿತು ಉಪನ್ಯಾಸ ನೀಡುವುದರೊಂದಿಗೆ ಇತರ ಕಾರ್ಯಕ್ರಮಗಳನ್ನು ಆಯೋಜಿಸಿ ಅರ್ಥಪೂರ್ಣ ಜಯಂತಿ ಆಚರಿಸೋಣ ಎಂದು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸಿಲ್ದಾರರಾದ ಮುರಳಿದ ರಾವ್ ಕುಲಕರ್ಣಿ, ತಾಲೂಕ ಪಂಚಾಯಿತಿ ಇ ಓ ಸಂತೋಷ್ ಬಿರಾದರ ಪಾಟೀಲ, ಕುಕನೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ, ತಾಲೂಕ ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಡಾ,ಶಿವಶಂಕರ್ ಕರಡಿಕಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.