FLASH NEWS : ಏ. 3 ರಿಂದ 5ರವರಿಗೆ ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

You are currently viewing FLASH NEWS : ಏ. 3 ರಿಂದ 5ರವರಿಗೆ ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

FLASH NEWS : ಏ. 3 ರಿಂದ 5ರವರಿಗೆ ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

ಮುಂಡರಗಿ : ಇದೆ ಏಪ್ರಿಲ್ 3 ರಿಂದ 5ರವರಿಗೆ ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಕರಬಸಪ್ಪ ಹಂಚಿನಾಳ ಹೇಳಿದರು. 

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ವಿಶೇಷತೆಯನ್ನು ಹೊಂದಿರುವ ದೇವಸ್ಥಾನಗಳಲ್ಲಿ ಒಂದಾದ ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನವು ಒಂದಾಗಿದೆ. ವೀರಭದ್ರೇಶ್ವರ ಸ್ವಾಮಿಯೇ ದೇವಸ್ಥಾನವು ಹಲವು ವಿಶೇಷತೆಯನ್ನು ಹೊಂದಿರುವ ಉದ್ಭವ ಮೂರ್ತಿಯ ದೇವಸ್ಥಾನವು ಇದಾಗಿದ್ದು ಗುಡ್ಡದಮೇಲೆ ಇರುವುದರಿಂದ ಅತಿ ಸುಂದರ ಹಾಗೂ ವಿಶೇಷತೆಯನ್ನು ಹೊಂದಿದೆ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ತುಂಗಭದ್ರಾ ನದಿ ಹರಿಯುತ್ತಿರುವುದರಿಂದ ದೇವಸ್ಥಾನವು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.

ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನವನ್ನು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಕರಬಸಪ್ಪ ಹಂಚಿನಾಳ ಅವರು ತಮ್ಮ ಕಮಿಟಿಯ ಎಲ್ಲ ಸದಸ್ಯರನ್ನು ಒಳಗೊಂಡ ದೇವಸ್ಥಾನದ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. 

ಅವರಂತೆ ದೇವಸ್ಥಾನವು ಸಂಪೂರ್ಣ ಕಲ್ಲಿನಿಂದ ಸುಂದರವಾಗಿ ನಿರ್ಮಾಣಗೊಂಡಿತು ಹಾಗೂ ಕಾಳಿಕಾ ದೇವಿಯ ದೇವಸ್ಥಾನವು ಸಹ ಕಲ್ಲಿನಿಂದ ಸುಂದರವಾಗಿ ನಿರ್ಮಾಣ ಮಾಡುವುದ ರೊಂದಿಗೆ ದೇವಸ್ಥಾನಕ್ಕೆ ಬಂದ ಭಕ್ತರಿಗೆಲ್ಲ ಮಹಾಪ್ರಸಾದ ವ್ಯವಸ್ಥೆಯ ಸಹ ನಡೆದುಕೊಂಡು ಬರುತ್ತಿದೆ.

ಅದರಂತೆ ಪ್ರತಿ ವರ್ಷ ನಡೆದುಕೊಂಡು ಬರುವ ಜಾತ್ರಾ ಮಹೋತ್ಸವದಂತೆ ಈ ವರ್ಷವು ಕೂಡ ಏಪ್ರಿಲ್ 3 ರಂದು ಮಹಾರಥೋತ್ಸವ ಧರ್ಮಸಭೆ 

ಏ. 4 ನಾಲ್ಕರಂದು ಅಗ್ನಿ ಮಹೋತ್ಸವ ಏ 5 ರಂದು ಓಕಳಿ ಕಾರ್ಯಕ್ರಮ ನಡೆಯುತ್ತದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕರಬಸಪ್ಪ ಹಂಚಿನಾಳ ನಮ್ಮ ಮಾಧ್ಯಮ ಮುಖಾಂತರ ನೀಡಿದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!