BIG NEWS : ನಕಲಿ ಚಿನ್ನವಿಟ್ಟು 11 ಕೋಟಿ ಲಪಟಾಯಿಸಿದ ಬ್ಯಾಂಕ್ ಮ್ಯಾನೇಜರ್!!
ರಾಯಚೂರು : ಬೇನಾಮಿ ಖಾತೆಗಳಿಗೆ ನಕಲಿ ಚಿನ್ನ ಅಡವಿಟ್ಟು ರಾಷ್ಟೀಕೃತ ಬ್ಯಾಂಕ್ ಗೆ ಬರೋಬ್ಬರಿ 11 ಕೋಟಿ ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಯಚೂರಿನ ಗಾಂಧಿ ಚೌಕ್ ಬಳಿ ಇರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ ಗೋಲ್ಡ್‌ಲೋನ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಪತ್ತೆಯಾಗಿದೆ.
ಬ್ಯಾಂಕ್ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ಈ ಗೋಲ್‌ಮಾಲ್ ನಡೆಸಿದ್ದು, ಆತ ಪರಾರಿಯಾಗಿರುವ ಘಟನೆ ನಡೆದಿದೆ. ಈತನ ವಿರುದ್ಧ ಬ್ಯಾಂಕ್ ಆಫ್ ಮಹಾರಾಷ್ಟ್ರದ ರಿಜಿಯನಲ್ ಮ್ಯಾನೇಜರ್ ಸುಚೇತ್ ಎಂಬವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ಗೆ ಬಂದು ಮೂರು ವರ್ಷಗಳಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದಾರೆ. ಬಳಿಕ ಗ್ರಾಹಕರಿಗೆ ಗೊತ್ತಿಲ್ಲದೇ ಅವರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಮೋಸ ಮಾಡಿದ್ದಾರೆ. ನಕಲಿ ಖಾತೆಗಳಿಂದ ಹಣವನ್ನು ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಬ್ಯಾಂಕ್ನ ಹಣವನ್ನು 29 ನಕಲಿ ಖಾತೆಗಳಿಗೆ ಗೋಲ್ಡ್ ಲೋನ್ ಹೆಸರಿನಲ್ಲಿ ವರ್ಗಾಹಿಸಲಾಗಿದ್ದು, 8 ಸಂಬಂಧಿಕರ ಅಕೌಂಟ್ಗೆ ವರ್ಗಾವಣೆ ಮಾಡಿದ್ದಾರೆ. ಹಿಂದಿನ ಬ್ಯಾಂಕ್ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿರೋದು ಬ್ಯಾಂಕ್ ಆಡಳಿತ ಮಂಡಳಿ ಅಡಿಟ್ ನಲ್ಲಿ ಬೆಳಕಿಗೆ ಬಂದಿದೆ.