ಮುದಗಲ್ಲ :- ಕಾಂಗ್ರೆಸ್ ಕಚೇರಿಯಲ್ಲಿ ಶ್ರೀ ಸವಿತಾ ಮಹಿಷಿ೯ ಜಯಂತಿ ಆಚರಣೆ..

ಮುದಗಲ್ಲ :- ಕಾಂಗ್ರೆಸ್ ಕಚೇರಿಯಲ್ಲಿ ಶ್ರೀ ಸವಿತಾ ಮಹಿಷಿ೯ ಜಯಂತಿ ಆಚರಣೆ..

ಮುದಗಲ್ಲ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶ್ರೀ ಸವಿತಾ
ಮಹರ್ಷಿ ಜಯಂತಿ ಅಂಗವಾಗಿ ಮುಖಂಡರು ಪುಷ್ಪ
ನಮನ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ಜಲ್ಲಿ ಮಾತನಾಡಿ, ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷ, ಸಮಾಜ ಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ ಚರ್ತುವೇದಗಳಲ್ಲಿ ಒಂದಾದ ಸಂಗೀತ ವೇದ ಎಂದೇ ಕರೆಯಲ್ಪಡುವ ಸಾಮವೇದವನ್ನು ರಚಿಸಿದ ಮಹಾನ್ ಬ್ರಹ್ಮಜ್ಞಾನಿ ಸವಿತಾ ಮಹರ್ಷಿ ಸಾಮವೇದವು ಸಂಗೀತದ ಮೂಲಗ್ರಂಥವಾಗಿದ್ದು, ಹಾಗಾಗಿ ಸವಿತಾ. ಸಮಾಜದವರು ಸಂಗೀತ, ವೈದ್ಯ ವೃತ್ತಿ ಹಾಗೂ ಕ್ಷೌರಿಕ
ವೃತ್ತಿಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು,
ಸರ್ವರಿಗೂ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸತೀಶ್ ಬೋವಿ , ಅರುಣ್ ಕುಮಾರ್, ಸಂಗಮೇಶ ಸರಗಣಚಾರಿ, ಕೃಷ್ಣ ಚಲುವಾದಿ, ಬಸವರಾಜ್ ಹಿರೇಮನಿ , (ಬುಲೆಟ್ ) ಬಸವರಾಜ ಬಂಕದಮನೆ, ಶಾಲಾಂ ಟೈಲರ್ , ಮಂಜುನಾಥ , ಮಹಾಂತೇಶ ಭೋವಿ, ಚಂದಪಾಷ ಜಮಾದಾರ,ಹುಸೇನ್ , ಇತರರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!