ಮುದಗಲ್ಲ :-ಶಾಂತಿ ಸೌಹಾರ್ದತೆಯಿಂದ ಯುಗಾದಿ, ರಂಜಾನ್‌ ಆಚರಣೆ ಎಲ್ಲರ ಸಹಕಾರ ಮುಖ್ಯ :- ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ್..

ಮುದಗಲ್ಲ ವರದಿ…

ಶಾಂತಿ ಸೌಹಾರ್ದತೆಯಿಂದ ಯುಗಾದಿ, ರಂಜಾನ್‌ ಆಚರಣೆ ಎಲ್ಲರ ಸಹಕಾರ ಮುಖ್ಯ :- ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ್..

ಮುದಗಲ್ಲ :- ಈ ಬಾರಿ ಯುಗಾದಿ ಹಾಗೂ ರಂಜಾನ್ ಹಬ್ಬಗಳು ಒಟ್ಟಿಗೆ ಬಂದಿವೆ. ಹಬ್ಬಗಳು ಒಟ್ಟಿಗೆ ಬರುವುದು ಸೌಹಾರ್ಧತೆಯ ಸಂಕೇತ ಈ ಹಿನ್ನೆಲೆಯಲ್ಲಿ ಹಿಂದು ಹಾಗೂ ಮುಸ್ಲಿಂ ಸಮುದಾಯ ದವರು ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದೇ ಶಾಂತಿಯುತವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕು ಮುಂಬರುವ ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು ಶಾಂತಿ, ಸೌಹಾರ್ದತೆಯಿಂದ ಆಚರಣೆ ಮಾಡಲು ಎಲ್ಲರೂ ಸಹಕರಿಸಿ ಸೌಹಾರ್ಧತೆ ಕಾಪಾಡಿ ಎಂದು ಲಿಂಗಸಗೂರು ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ್ ಸಲಹೆ ನೀಡಿದರು.

ಮುದಗಲ್ಲ ಪೊಲೀಸ ಕಚೇರಿ ಆವರಣದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಸೌಹಾರ್ಧತೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಈ ಬಾರಿ ಯುಗಾದಿ ಹಾಗೂ ರಂಜಾನ್ ಹಬ್ಬಗಳು ಒಟ್ಟಿಗೆ ಬಂದಿವೆ. ಹಬ್ಬಗಳು ಒಟ್ಟಿಗೆ ಬರುವುದು ಸೌಹಾರ್ಧತೆಯ ಸಂಕೇತ ಈ ಹಿನ್ನೆಲೆಯಲ್ಲಿ ಹಿಂದು ಹಾಗೂ ಮುಸ್ಲಿಂ ಸಮುದಾಯ ದವರು ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದೇ ಶಾಂತಿಯುತವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕು ಎಂದರು. ಹಾಗೂ ಹಬ್ಬದ ದಿನಗಳ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದರಿಂದ ಧ್ವನಿವರ್ಧ ಕಗಳನ್ನು ಹೆಚ್ಚಾಗಿ ಬಳಕೆ ಮಾಡಬಾರದು. ಹಿಂದೂ ಹಾಗೂ ಮುಸ್ಲಿಂ ಸಮುದಾಯವರು ಒಗ್ಗಟ್ಟಾಗಿ ಹಬ್ಬಗಳನ್ನು ಆಚರಣೆ ಮಾಡುವಂತೆ ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಹಾಗೂ ಪ್ರಚೋದಕಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ದ ನಿರ್ಧಾಕ್ಷಿಣ ಕ್ರಮಕೈಗೊಳ್ಳಲಾಗುವುದು ಎಂದರು
ಈ ಸಂದರ್ಭದಲ್ಲಿ ಮಸ್ಕಿ CPI ರಾಮಣ್ಣ ಜಲಗೇರಿ ,ಸ್ಥಳೀಯ
ಪಿಎಸ್ಐ ವೆಂಕಟೇಶ ಮಾಡಗೇರಿ, ಜಮೀರ್ ಅಹ್ಮದ್ ಖಾಜಿ, ಗುಂಡಪ್ಪ ಗಂಗಾವತಿ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ರಾದ ಶರಣಪ್ಪ ಕಟ್ಟಿಮನಿ, ಮಹಿಬುಬಸಾಬ್, ಅಮೀರ್ ಬೇಗ್ ಉಸ್ತಾದ್, ರಫೀಕ್ ಖಾಜಿ, ಪಾಷಾ ಕಡ್ಡಿಪುಡಿ, ದಳಪತಿ ರಾಜಣ್ಣ, ಪಿಎಲ್ಡಿ ಬ್ಯಾಂಕು ನಿರ್ದೇಶಕ ಸದಸ್ಯ ಹುಸೇನಪ್ಪ, ತೆರಿಬಾವಿ ಶರಣಪ್ಪ, ಗ್ಯಾನಪ್ಪ ಹೊಳಿಯಾಚಿ, ಬಸವರಾಜ ತೆಲಗಡೆಮನಿ, ಹುಸೇನಪ್ಪ, ವೆಂಕಟೇಶ ಹಿರೇಮನಿ, ಮಲ್ಲಪ್ಪ ಮಾಟೂರ್ ನಾಗರಾಜ್  ತಳವಾರ, ಸೇರಿದಂತೆ ಇತರರಿದ್ದರು.

 ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!