ಹೊಸಳ್ಳಿ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮ

You are currently viewing ಹೊಸಳ್ಳಿ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮ

ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ಕಡ್ಟಾಯವಾಗಿ ಮತದಾನ ಮಾಡಿ: ಶರಣಪ್ಪ ಹಾಲಕೇರಿ

ಯಲಬುರ್ಗಾ : ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬದಂತೆ‌ ಆಚರಿಸಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಎರಡನೇ ಹಂತದ ಸ್ವೀಪ್ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಈ ಬಾರಿ ವಿಶೇಷವಾಗಿ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶಿಷ್ಟಚೇತನರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. 

ಉಳಿದವರಿಗೆ ತಮ್ಮ ಗ್ರಾಮದಲ್ಲೆ ಮತಗಟ್ಟೆಗೆ ಹೋಗಿ ಕಡ್ಡಾಯವಾಗಿ ಮತದಾನ ಮಾಡಬೇಕು. ಅದಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ಖಚಿತಪಡಿಸಿಕೊಳ್ಳಬೇಕು. ಹೊಸದಾಗಿ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿದ್ದ ನೂರಾರು ಜನ ಅಕುಶಲ ಕಾರ್ಮಿಕರಿಗೆ ಕೆಎಚ್ ಪಿಟಿ ವತಿಯಿಂದ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಲಾಯಿತು.ಬಳಿಕ ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಈ ವೇಳೆ ತಾ.ಪಂ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಪಿಡಿಒರಾದ ರಮೇಶ ದೊಡ್ಡಮನಿ, ತಾಂತ್ರಿಕ ಸಹಾಯಕರಾದ ವಿಜಯಕುಮಾರ, ಕರವಸೂಲಿಗಾರರಾದ ಕಲ್ಲಪ್ಪ, ಡಿಇಒರಾದ ಮಹೇಶ್, ಗ್ರಾಮ ಕಾಯಕ ಮಿತ್ರರಾದ ವಿದ್ಯಾ ಗಾಣಿಗೇರ್ ಹಾಗೂ ಕೆಎಚ್ ಪಿಟಿ ಸಿಬ್ಬಂದಿ, ಗ್ರಾ.ಪಂ, ಸಿಬ್ಬಂದಿ, ಅಕುಶಲ ಕಾರ್ಮಿಕರು ಹಾಗೂ ಇತರರಿದ್ದರು.

Leave a Reply

error: Content is protected !!