ದ್ಯಾಂಪೂರ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ,ತಹಶೀಲ್ದಾರ್‌ಗೆ ಮನವಿ

You are currently viewing ದ್ಯಾಂಪೂರ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ,ತಹಶೀಲ್ದಾರ್‌ಗೆ ಮನವಿ

ಕುಕನೂರು: ತಾಲೂಕಿನ ದ್ಯಾಂಪೂರ ಗ್ರಾಮದಲ್ಲಿರುವ ತಲೆ ತಲಾಂತರಗಳಿಂದ ಇದ್ದ ಸ್ಮಶಾನ ಭೂಮಿಯನ್ನು ಭೂಮಾಲಿಕರು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದಂತಾಗಿದೆ.
ಈ ಸುಮಾರು ವರ್ಷಗಳಿಂದ ಸರ್ವೇ ನಂ, ೨೨೫ರ ಮೂಲ ಮಾಲಿಕರಿಂದ ಸ್ಮಶಾನಕ್ಕಾಗಿ ಜಮೀನಿ ಬಿಟ್ಟು ಕೊಡುವಂತೆ ಗ್ರಾಮಸ್ಥರು ಕೇಳಿಕೊಂಡರು ಅವರು ಬಿಟ್ಟು ಕೊಡುವುದಾಗಿ ಒಪ್ಪಿದ್ದರು. ೨೦೨೨ ರಂದು ಸರ್ಕಾರಿ ಆದೇಶದಂತೆ ಸ್ಮಶಾನಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೇ ಆರಂಭಿಸಿದ್ದರು. ಈ ಕುರಿತು ಸ್ಥಳಕ್ಕೆ ಈ ಹಿಂದಿನ ತಹಶೀಲ್ದಾರ್ ಭೇಟಿ ನೀಡಿ ಅಲ್ಲಿ ಸಿಕ್ಕಿರುವ ಅಸ್ಥಿಪಂಜಿರ ಹಾಗೂ ಶವ ಹೂಳಿದ ಕುರುಹುಗಳನ್ನು ನೋಡಿ ಸದರಿ ಸರ್ವೇ ನಂ, 225 ರಲ್ಲಿ ಸ್ಮಶಾನ ಭೂಮಿ ಇರುವುದು ಸತ್ಯ ಎಂದು ವರದಿಯನ್ನು ನೀಡಿರುತ್ತಾರೆ.
ಈ ವಿಷಯವನ್ನು ತಿಳಿದ ಜಮೀನಿನ ಮಾಲೀಕರು ಜಮೀನನ್ನು ಮೊತ್ತಬ್ಬರಿಗೆ ಮಾರಾಟ ಮಾಡಿರುತ್ತಾರೆ. ಈ ವಿಷಯ ತಿಳಿದು ಗ್ರಾಮಸ್ಥರು ಜಮೀನಿನ ಖಾತಾ ಬದಲಾವಣೆ ಸಂದರ್ಭದಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು ಸಹ ಖಾತೆ ಬದಲಾವಣೆಯಾಗಿತ್ತದೆ.
ಈ ಕುರಿತು ಹಿಂದಿನ ತಹಶೀಲ್ದಾರರು ಕರೆದ ಸಭೆಯಲ್ಲಿ ಸದರಿ ಜಮೀನಿನ ಪಹಣಿ ಪತ್ರಿಕೆಯಲ್ಲಿ ಕಲಂ,11 ರಲ್ಲಿ ಸ್ಮಶಾನಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೇ ಜಾರಿಯಲ್ಲಿರುತ್ತದೆ ಎಂದು ನಮೂದಿಸಬೇಕೆಂದು ಒತ್ತಾಯಿಸಿದ್ದೇವೆ.
ಆದರೂ ಸಹಿತಿ ಸ್ಮಶಾನ ಭೂಮಿಯ ಜಮೀನು ಮೊತ್ತೊಬ್ಬರ ಹೆಸರಿಗೆ ವರ್ಗಾವಣೆಯಾಗಿದ್ದು ಕೂಡಲೆ ಸದರಿ ಜಮೀನಿನ ಪಹಣಿ ಪತ್ರಿಕೆಯಲ್ಲಿ ಕಂ,11ರಲ್ಲಿ ಸ್ಮಶಾನಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೇ ಜಾರಿಯಲ್ಲಿರುತ್ತದೆ ಎಂದು ನಮೂದಿಸಬೇಕು ಹಾಗೂ ಸ್ಮಶಾನಕ್ಕಾಗಿ ಬಳಕೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ 2023ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ತಹಶೀಲ್ದಾರ್ ಗೆ ಮನವಿ ಸಲ್ಲಿದರು.
ತಹಶೀಲ್ದಾರ್ ನೀಲ ಪ್ರಭಾ ಮನವಿಯನ್ನು ಸ್ವೀಕರಿಸಿ ಮುಂದಿನ ಕ್ರಮಕ್ಕಾಗಿ ಈಗಲೇ ಮನವಿಯನ್ನು ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕುಕನೂರು ಠಾಣೆಯ ಪಿಎಸ್‌ಐ ಯು,ಡಾಕೇಶ, ಉಪತಹಶಿಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ ಹಾಗೂ ಗ್ರಾಮದ ಪ್ರಮುಖರಾದ ಯಲ್ಲಪ್ಪ ನೋಟಗಾರ, ಗಗನ ನೋಟಗಾರ, ಬಸವರಾಜ ಬೀಡನಾಳ, ಶಿವಲಿಂಗಯ್ಯ ಶಿರೂರಮಠ, ದೇವಪ್ಪ ಮರಡಿ, ಮಂಜು ಮರಡಿ, ಕರಿಬಸಪ್ಪ ಮೂಸುರ,ಮುದಿಯಪ್ಪ ಹಾಳಕೇರಿ, ಪರಶುರಾಮ ನೋಟಗಾರ, ಹೊನ್ನಪ್ಪ ಮರಡಿ, ಪ್ರೇಮರಾಜ, ಹಾಗೂ ಇತರರಿದ್ದರು,

Leave a Reply

error: Content is protected !!