Post Views: 565
ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್ :
BREAKING : ಲೋಕಾಯುಕ್ತರ ಅಕ್ರಮ ಶಂಕೆ..! : ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ..!!

ಬೆಂಗಳೂರು : ಇದೀಗ ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ ಎದುರಾಗುವ ಆತಂಕ ಶುರುವಾಗಿದ್ದು, ಲೋಕಾಯುಕ್ತರೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಲೋಕಾಯುಕ್ತ ಎಸ್‌ಪಿ ರಿಲೀವ್ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಅದು ಅಲ್ಲದೇ ಅಕ್ರಮದಲ್ಲಿ ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರು ಕೂಡ ತಳಕು ಹಾಕಿಕೊಂಡಿದೆ ಎಂಬ ಅನುಮಾನ ಮೂಡಿದೆ. ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಗುಮಾನಿ ಹಬ್ಬಿದ್ದು, ಇಬ್ಬರು ಸಚಿವರ ಪಿಎ ಗಳ ಹೆಸರನ್ನು ಲೋಕಾಯುಕ್ತ ಎಸ್ ಪಿ ಬಂಧನಕ್ಕೂ ಮುನ್ನ ಉಲ್ಲೇಖಿಸಿದ್ದಾರೆ. ಇನ್ನು ಮುಂದುವರೆದು ಸಚಿವರ ಪಿಎಗಳು ಅಕ್ರಮದಲ್ಲಿ ಕೈಜೋಡಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ಈ ಒಂದು ಅಕ್ರಮ ಪ್ರಕರಣ ಸರ್ಕಾರದ ವಿರುದ್ಧ ವಿರೋಧ ಪಕ್ಷಕ್ಕೆ ಇದೀಗ ಮತ್ತೊಂದು ಅಸ್ತ್ರ ದೊರೆಯುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲೂ ಮುಜುಗರ ಉಂಟಾಗಿತ್ತು. ಲೋಕಾಯುಕ್ತರೆ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಮುಜುಗರ ಉಂಟಾಗಿತ್ತು. ಇದೀಗ ಸಚಿವರ ಆಪ್ತ ಕಾರ್ಯದರ್ಶಿಗಳ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಚಿವರ ಹೆಸರು ಬಹಿರಂಗಗೊಂಡರೆ ಮತ್ತಷ್ಟು ಸರ್ಕಾರಕ್ಕೆ ಮುಜುಗರ ಆಗುವುದು ಖಂಡಿತ.