ಅಂತರ್‌ ಜಾತಿ ವಿವಾಹ : ಪೋಲಿಸ್‌ ಠಾಣೆಯ ಮುಂದೇನಾಯ್ತು ಗೊತ್ತ?

You are currently viewing ಅಂತರ್‌ ಜಾತಿ ವಿವಾಹ : ಪೋಲಿಸ್‌ ಠಾಣೆಯ ಮುಂದೇನಾಯ್ತು ಗೊತ್ತ?

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಇತ್ತೀಚಿಗೆ ಅಂತರ್‌ ಜಾತಿ ವಿವಾಹಗಳು ಹೆಚ್ಚಾಗುತ್ತಿದ್ದು, ಇಲ್ಲೊಬ್ಬಳು ಯುವತಿ ಪೋಲಿಸ್‌ ಠಾಣೆಯ ಮುಂದೆಯೇ ನಾನು ನನ್ನ ಹುಡುಗನ ಜೊತೆಗೆ ಹೋಗುತ್ತೇನೆ ಎಂದು ಹೇಳಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದ ನಿವಾಸಿ ಬಾನುಶ್ರಿ ಮಧುಸೂಧನ್ ಎಂಬ ಯುವತಿ ಕಾಲೇಜು ದಿನದಿಂದಲೇ ಆ ಹುಡುಗನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಇಬ್ಬಎಂದು ನಗರದ ಗುಂಡಿ ಬಂಡೆ ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೇ ಯುವತಿ ಬಾನುಶ್ರಿ ತನ್ನ ಹುಡುಗನಿಗೆ ತೊಂದರೆಯಾಗಬಹುದು ಎಂದು ತಿಳಿದು ನೇರವಾಗಿ ಪೋಲಿಸ್‌ ಠಾಣೆಗೆ ಬಂದಿದ್ದಾಳೆ. ಈ ಸಮಯದಲ್ಲಿ ಯುವತಿ ಮತ್ತು ಯುವಕ ಪರವಾಗಿ ನೂರಾರು ಜನರು ಆಗಮಿಸಿದ್ದಾರೆ.

ಪೋಲಿಸ್‌ ಠಾಣಾ ಇನ್ಸ್‌ಪೆಕ್ಟರ್‌ ಅವರ ಕುಟುಂಬಗಳ ಮುಂದೆ ನಿಲ್ಲಿಸಿ ನಿನ್ನ ನಿರ್ಧಾರವನ್ನು ತಿಳಿಸುವಂತೆ ಕೇಳಿದ್ದಾರೆ. ಯುವತಿ, ‘ನಾನು ಹುಡುಗನ ಜೊತೆಗೆ ಹೋಗುವೆ’ ಎಂದು ತಿಳಿಸಿದ್ದಾರೆ. ಈ ನಡುವೆ ನವದಂಪತಿಗಳು ‘ನಮಗೆ ಜೀವ ಬೆದರಿಕೆ ಇತ್ತು, ಈ ಹಿನ್ನಲೆಯಲ್ಲಿ ನಾವು ಪೋಲಿಸರ ಮೊರೆ ಹೋಗಿದ್ದೇವು, ನಾವು ಚೆನ್ನಾಗಿ ಇರ್ತೆವೆ ನಮಗೆ ಯಾವುದೇ ತೊಂದರೆ ಇಲ್ಲದೇ ಇರುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

error: Content is protected !!