BREAKING : ಮುನಿರಾಬಾದ್‌ನಲ್ಲಿ ಅಪ್ರಾಪ್ತ ಪ್ರೇಮಿಗಳಿಬ್ಬರು ಆತ್ಮ ಹತ್ಯೆ : ಅಸಲಿ ಕಾರಣ ಇಲ್ಲಿದೆ..!! : ಸ್ಥಳೀಯರಿಗೆ ಶಾಕ್..!
ಕೊಪ್ಪಳ : ಕಾಲುವೆಗೆ ಹಾರಿ ಅಪ್ರಾಪ್ತ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಡ್ಯಾಂನ ಎಡದಂಡೆ ಕಾಲುವೆ ಬಳಿ ಜುಲೈ 10 ರಂದು (ಗುರುವಾರ ಸಂಜೆ ವೇಳೆ) ನಡೆದಿದೆ.
ಮೃತರನ್ನು ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದ ಪ್ರವೀಣ್ ಕುಮಾರ್ (ವಯಸ್ಸು18 ವರ್ಷ) ಹಾಗೂ ಸಣಾಪುರ ಗ್ರಾಮದ ಅಂಜಲಿ (ವಯಸ್ಸು18 ವರ್ಷ) ಎಂದು ಗುರುತಿಸಲಾಗಿದೆ.
ಇವರಿಬ್ಬರು ಕಳೆದ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದರು ಎಂಬ ಗುಮಾನಿ ಇತ್ತು, ಈ ವಿಷಯ ತಿಳಿದಂತ ಪೋಷಕರು ಇಬ್ಬರಿಗೂ ಬುದ್ದಿವಾದ ಹೇಳಿದರು. ಆದರೂ ಇದಕ್ಕೆ ಒಪ್ಪದ ಪ್ರೇಮಿಗಳಿಗೆ ಪೋಷಕರು ಮದುವೆ ಮಾಡಿ ಕೊಡುವ ಭರವಸೆ ನೀಡಿದರು.
ನಂತರ ಮನೆಗೆ ವಾಪಸ್ ಮರಳಿದ್ದರು ಎಂದು ತಿಳಿದು ಬಂದಿದೆ. ಆದರೆ ಮನೆಯವರು ಒಂದಾಗಲು ಬಿಡುವುದಿಲ್ಲ ಎಂಬ ಭಯದಿಂದ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಇಬ್ಬರ ದುಡಕಿನ ನಿರ್ಧಾರ ಕಂಡು ಪಾಲಕರು ಮತ್ತು ಸ್ಥಳೀಯರಿಗೆ ಶಾಕ್ ಆಗಿದೆ. ಇಬ್ಬರ ಮೃತ ದೇಹಕ್ಕಾಗಿ ಶೋಧಕಾರ್ಯ ಕೈಗೊಂಡಿದ್ದಾರೆ.
ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಕೊಂಡು, ತನಿಖೆ ಶುರುಮಾಡಿದ್ದಾರೆ.