LOCAL NEWS : ಹಡಪದ ಅಪ್ಪಣ್ಣ ಜಯಂತಿ| ವಚನಗಳ ಮೂಲಕ ಸಮಾಜ ಸುಧಾರಣೆ: ಸಂಗನಗೌಡ, ಪೊಲೀಸ್ ಪಾಟೀಲ್
ಮುದಗಲ್ಲ :- ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರು’ ಕರುನಾಡ ವಿಜಯ ಸೇನೆಯ ರಾಮತ್ನಾಳಗ್ರಾಮ ಘಟಕದ ,ಅಧ್ಯಕ್ಸರಾದ, ಸಂಗನಗೌಡ, ಪೊಲೀಸ್, ಪಾಟೀಲ್
ಅವರು ಹೇಳಿದರು.
ಇಲ್ಲಿಯ ಪೋಲಿಸ್ ಠಾಣೆಯಲ್ಲಿ ಗುರುವಾರ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಮಾಡಿ ಮಾತನಾಡಿದರು.
‘ಹಡಪದ ಅಪ್ಪಣ್ಣ ಅವರ ವಚನಗಳು ಬಸವಣ್ಣನವರ ಮೇಲಿನ ಗೌರವ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ತಮ್ಮ ಜೀವನದುದ್ದಕ್ಕೂ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ವಚನಗಳ ಮೂಲಕ ಶ್ರಮಿಸಿದ್ದಾರೆ’ ಎಂದರು.
ಹಡಪದ ಅಪ್ಪಣ್ಣನವರು ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಶರಣ. ಅನುಭವ ಮಂಟಪದಲ್ಲಿ ಬಸವಣ್ಣನವರ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಮಾದರಿಯಾಗಿದ್ದಾರೆ. ವೃತ್ತಿ ಕಾಯಕದೊಂದಿಗೆ ವಚನ ರಚನೆ ಹಾಗೂ ಸಮಾಜ ಸೇವೆಯ ಪ್ರವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ’ ಎಂದರು.
ಪೊಲೀಸ್ ಠಾಣೆಯಲ್ಲಿ ASI ಮಲ್ಲಯ್ಯ ಸ್ವಾಮಿ ಅವರು ಹಡಪದ ಅಪ್ಪಣ್ಣ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಪೋಲೀಸ್ ಪೇದೆ ಯಾದ ರಂಗಪ್ಪ , ದೇವಮ್ಮ ,ಹಾಗೂ ಅನಿಲ್ ಕುಮಾರ್ ಖೈರವಾಡಗಿ. ಹನುಮಂತಪ್ಪ ಹಡಪದ ಸಮಾಜದ ಘಟಕ ಅಧ್ಯಕ್ಷರಾದ ಶ್ರೀ ಗುಂಡಪ್ಪ ಕಿಲ್ಲಾ. ಗೌರವಾಧ್ಯಕ್ಷರು ತಿಪ್ಪಣ್ಣ ಮಸ್ತಿಪೇಟೆ, ಉಪಾಧ್ಯಕ್ಷರು ಹನುಮಂತಮ್ ಜಕ್ಕೆರಮಡು, ಪ್ರಧಾನ ಕಾರ್ಯದರ್ಶಿ ಶಿವಣ್ಣ ಎಂ ಖ್ಗೈರವಾಡಗಿ,ಹಾಗೂ ಈಶಪ್ಪ ವ್ಯಾಕರನಾಳ.ಅಮರೇಶ್ ಮಟ್ಟೂರ ಸಮಾಜದ ಮುಖಂಡರುಗಳಾದ . ದೊಡ್ಡಪ್ಪ ಕಂಬಳಿಹಾಳ . ಬಸವ ಬನ್ನಿಗೂಳ. ಬಸವರಾಜ ಆಮದಿಹಾಳ. ಬಸವ ಅದಪುರ್. ಬಸವಲಿಂಗಪ್ಪ ತಿಮ್ಮಾಪುರ್. ಗಣೇಶ್ ರಾಮತ್ನಾಳ. ಸೊಪಣ್ಣ ಆಶಿಹಾಳ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.