BREAKING NEWS : ನಾಳೆ ನಡೆಯಬೇಕಿದ್ದ ಕೆ.ಇ.ಎ ನೇಮಕಾತಿ ಪರೀಕ್ಷೆಗಳನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ..!!

You are currently viewing BREAKING NEWS : ನಾಳೆ ನಡೆಯಬೇಕಿದ್ದ ಕೆ.ಇ.ಎ ನೇಮಕಾತಿ ಪರೀಕ್ಷೆಗಳನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ..!!

ಪ್ರಜಾವೀಕ್ಷಣೆ ಸುದ್ದಿ :-

BREAKING NEWS : ನಾಳೆ ನಡೆಯಬೇಕಿದ್ದ ಕೆ.ಇ.ಎ ನೇಮಕಾತಿ ಪರೀಕ್ಷೆಗಳನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ..!!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಅವರ ನಿಧನರಾದ ಹಿನ್ನಲೆಯಲ್ಲಿ ನಾಳೆ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಹಾಗಾಗಿ ಸಾರ್ವತ್ರಿಕ ರಜೆ ಇರುವ ಕಾರಣ ನಾಳೆ ನಡೆಯಬೇಕಿದ್ದಂತ ಕೆ.ಇ.ಎ ನೇಮಕಾತಿ ಪರೀಕ್ಷೆಗಳನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂದು ಮಾಜಿ ಸಿಎಂ ಮತ್ತು ಕೇಂದ್ರ ಸಚಿವರಾಗಿದ್ದಂತ ಎಸ್ ಎಂ ಕೃಷ್ಣ ಅವರು ನಿಧನರಾಗಿರುವ ಕಾರಣ ನಾಳೆ (ದಿನಾಂಕ 11ರಂದು) ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿರುತ್ತದೆ ಎಂದಿದ್ದಾರೆ.

ಆದುದ್ದರಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಿನಾಂಕ 11ರಂದು ನಿಗದಿಪಡಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ ಡಿಸೆಂಬರ್ 12 ಮುಂದೂಡಲಾಗಿದೆ ಎಂದು ತಿಳಿಸಿದೆ.

Leave a Reply

error: Content is protected !!