LOCAL EXPRESS : ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಶಾಸಕ ಬಸವರಾಜ ರಾಯರೆಡ್ಡಿ..! ಏನೀದು ಘಟನೆ..!!

You are currently viewing LOCAL EXPRESS : ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಶಾಸಕ ಬಸವರಾಜ ರಾಯರೆಡ್ಡಿ..! ಏನೀದು ಘಟನೆ..!!

ಕುಕನೂರು : ತಾಲೂಕಿನ ಗುದ್ನೇಶ್ವರ ಮಠದ ದೇವಸ್ಥಾನಕ್ಕೆ ಸೇರಿದ ಸಾಗುವಳಿ ಹಾಗೂ ಖಾಲಿ ಜಮೀನನ್ನು ಜಿಲ್ಲಾಡಳಿತ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ವಶಪಡಿಸಿಕೊಂಡು ಅಲ್ಲಿ ತಹಸೀಲ್ದಾರ್ ಕಚೇರಿ, ತಾಲೂಕಾ ನ್ಯಾಯಾಲಯ ಹಾಗೂ ಬುದ್ದ ಬಸವ ಅಂಬೇಡ್ಕರ್‌ ಬೃಹತ್‌ ಭವನದ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

LOCAL EXPRESS : “ನಮಗೆ ಮದ್ಯದ ಅಂಗಡಿ ಬೇಕು” : ಗ್ರಾಮಸ್ಥರಿಂದ ಮನವಿ! 

ಇಲ್ಲಿನ ಕುಕನೂರು ಪಟ್ಟಣದ 19 ನೇ ವಾರ್ಡ್ ನ ಗುದ್ನೇಶ್ವರ ಮಠದ ಸರ್ವೆ ನಂಬರ್ 78 ರಲ್ಲಿ 40 ಎಕರೆ ಜಮೀನು 18 ಮಂದಿ ದೇವಸ್ಥಾನದ ಸೇವಾದಾರರಿಗೆ ಈ ಹಿಂದೆ ಮಿಸಾಲಿಡಲಾಗಿದ್ದು, ಇದರಲ್ಲಿ ಸ್ಥಳೀಯ ಶಾಸಕ ಬಸವರಾಜ ರಾಯರಡ್ಡಿ ಅವರು, ಬಳಸಿಕೊಂಡು ತಹಸೀಲ್ದಾರ್ ಕಚೇರಿಸೇರಿದಂತೆ ಇತರ ಸರ್ಕಾರಿ ಕಟ್ಟಡ ಕಟ್ಟಲು ಮುಂದಾಗಿರುವುದಕ್ಕೆ ಗುದ್ನೇಶ್ವರ ಮಠದ ನಿವಾಸಿಗಳು ವಿರೋಧಿಸಿ, ಧರಣಿ ಸತ್ಯಗ್ರಹಕ್ಕೆ ಮುಂದಾಗಿದ್ದಾರೆ.

BIG NEWS : ಇಂದು ಹಾಗೂ 3 ದಿನ ಮದ್ಯ ಮಾರಾಟ ನಿಷೇಧ..!!

ಅಧಿಕಾರಿಗಳು v/s ಗುದ್ನೇಪ್ಪನ ಮಠದ ಜನರು..!!

ಈ ಕುರಿತಂತೆ ನಿನ್ನೆ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದಾರೆ. ಆದರೂ ಕೂಡಾ ಅಧಿಕಾರಿಗಳು ಗ್ರಾಮಸ್ಥರ ವಿರೋದದ ನಡುವೆ ಸರ್ವೆ ಕಾರ್ಯ ಮಾಡುತ್ತಿರುವುದಕ್ಕೆ ತೀವ್ರವಾಗಿ ವಿರೋಧಿಸಿದ್ದಾರೆ. ಇಂದು ಮತ್ತೆ ಅದೀಕಾರಿಗಳು ಸರ್ವೆ ಮಾಡುವುದಕ್ಕೆ ಬರಬಹುದು ಎಂದು ಭಾವಿಸಿ ಗ್ರಾಮಸ್ಥರು ಆ ಜಮೀನಿನಲ್ಲೆ ಜಾಂಢಾ ಹುರಿದ್ದಾರೆ.

“ಪ್ರಾಣ ಕೊಟ್ಟೆವೂ ಜಮೀನು ಕೊಡುವುದಿಲ್ಲ” ಎಂದು ಗ್ರಾಮಸ್ಥ ಮಲ್ಲಯ್ಯ ಅಲಸಿನ ಮರದ್ ಎಂಬುವರು ಶಾಸಕ ರಾಯರೆಡ್ಡಿಯವರ ವಿರುದ್ದ ಕವಚನದಲ್ಲೇ ಆಕ್ರೋಶ ವ್ಯಕ್ತಪಡೆಸಿದರು.

BIG NEWS : “ಕರ್ನಾಟಕಕ್ಕೆ 50ರ ಸಂಭ್ರಮ” : “ಲೋಗೋ” ಕಳುಹಿಸಿ 25 ಸಾವಿರ ರೂ.ಬಹುಮಾನ ಗೆಲ್ಲಿ..!!

“ಈ ವಿಚಾರದಲ್ಲಿ ನಮ್ಮ ಪ್ರಾಣ ಹೊಗುವುದಿಲ್ಲ, ಆದರೆ ಭೂಮಿ ಕಿತ್ತುಕೊಳ್ಳುತ್ತಿರುವ ಹುನ್ನಾರ ಮಾಡಿರುವ ಶಾಸಕನಿಗೆ ಒಂದು ಗತಿ ಕಾಣಿಸಿಯೇ ತಿರುತ್ತೇವೆ. ಯಾವುದೇ ಕಾರಣಕ್ಕೂ ದೇವಸ್ಥಾನ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ಬಿಡುವುದಿಲ್ಲ, ಶಾಸಕ ಬಸವರಾಜ ರಾಯರೆಡ್ಡಿ ಅವರು, ತಮ್ಮ ಕೀಳು ಮನಸ್ಥಿತಿಯನ್ನು ಹೊಂದಿದ್ದು, ತಾವು ಶಾಸಕರಾಗಿ ಆಯ್ಕೆ ಆದಾಗೆಲ್ಲಾ, ನಮ್ಮ ದೇವಸ್ಥಾನ ಜಾಗವನ್ನು ಕಬಳಿಸಿ ಸರ್ಕಾರಿ ಕಟ್ಟಡಗಳನ್ನು ಕಟ್ಟಿಸುತ್ತಾರೆ. ಆದರೆ ಇಲ್ಲಿನ ಜನರ ಪರಿಸ್ಥಿತಿ ಯಾವ ತರಹ ಇದೆ ಎಂದು ಸೂಕ್ಷ್ಮವಾಗಿದೆ ಗಮನಿಸಿಲ್ಲಿ ” ಎಂದು ಅಲ್ಲಿನ ಹಿರಿಯ ಗ್ರಾಮಸ್ಥೆ ಸಿದ್ದಲಿಂಗಮ್ಮನವರು ಆಕ್ರೋಶ ಹೊರಹಾಕಿದ್ದಾರೆ.

ಇದೀಗ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಯಾವ ತೀರವು ಪಡೆದುಕೊಳ್ಳಲಿದೆ ಎಂದು ಭಾರೀ ಕೂತುಹಲ ಮೂಡಿಸಿದೆ ಎನ್ನಲಾಗಿದೆ.

Leave a Reply

error: Content is protected !!