ಕುಕನೂರ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಕನೂರ ಮತ್ತು ಯಲಬುರ್ಗಾ ತಾಲೂಕಿಗೆ ಶುದ್ಧ ಕುಡಿಯುವ ನೀರು ಓದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಂಭಂದಿಸಿದಂತೆ, ಜೆ.ಜೆ.ಎಮ್ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಕ್ತಾಯ ಗೊಳಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜೆ.ಜೆ.ಎಮ್ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಮ್ ಪಾಂಡೆ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಮತ್ತು ಕುಕನೂರ ಅವಳಿ ತಾಲೂಕಿನ ಗ್ರಾಮಗಳ ವಾರು ಪ್ರತಿ ಮನೆಗಳಿಗೆ ಜೆಜೆಎಮ್ ಪೈಪ್ ಲೈನ್ ಸಂಪರ್ಕ, ಶಾಲೆ ಮತ್ತು ಅಂಗನವಾಡಿಗಳಿಗೆ ಕಡ್ಡಾಯವಾಗಿ ನೀರಿನ ಸಂಪರ್ಕ, ಶಾಲೆಗಳ ಅಡುಗೆ ಕೋಣೆಯ ವರೆಗೆ ನೀಡಲು ಗುತ್ತಿಗೆದಾರರಿಗೆ ಸೂಚಿಸಿದರು. ಅದನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಧೃಢೀಕರಣ ನೀಡಬೇಕು.
L&T ಟ್ಯಾಂಕ್ ಗಳಿಂದ ನೀರು ಸರಬರಾಜು ಮಾಡುವ ಟ್ಯಾಂಕ್ ಹತ್ತಿರ ಇರುವ ವಾಲ್ ಚೇಂಬರ್ ನಲ್ಲಿ ಕಲುಷಿತ ನೀರು ಸೇರದಂತೆ ಜಾಗೃತೆ ವಹಿಸಬೇಕು. ಗುತ್ತಿಗೆದಾರರು ಕಾಮಗಾರಿಯನ್ನು ಗ್ರಾಮ ಪಂಚಾಯತಿಗೆ ಹ್ಯಾಂಡ್ ಓವರ್ ಮಾಡಿದ ಮೇಲೆ 2-3 ತಿಂಗಳಲ್ಲಿ ವರೆಗೆ ಆಯಾ ಗುತ್ತಿಗೆದಾರರು ಲೀಕೇಜ್ ಅನ್ನು ಸರಿಪಡಿಸುವ ಜವಬ್ದಾರಿ ಅವರದ್ದು ಎಂದರು.
ಪಿ.ಡಿ.ಓ ರವರು ಪ್ರತಿ ಗ್ರಾಮಕ್ಕೆ ಪ್ರತಿಶತ 100% ರಷ್ಟು ಮನೆಗಳಿಗೆ ನಲ್ಲಿ ಸಂಪರ್ಕ ಹಾಗೂ ನೀರು ಸರಬರಾಜು ಆಗುವ ಬಗ್ಗೆ, ಗ್ರಾಮದಲ್ಲಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಸಭೆ ಮಾಡಿ ಗ್ರಾಮಸ್ಥರಿಗೆ ತಿಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್ ಪಾಟೀಲ್ , ಕಾರ್ಯಪಾಲಕ ಅಭಿಯಂತರ ಮಹೇಶ್ ಶಾಸ್ತ್ರೀ , ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಿಜ್ವಾನ್ ಬೇಗಂ, ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ವೆಂಕಟೇಶ್ ವಂದಾಲ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಶರಣಪ್ಪ ಕೆಳಗಿನಮನಿ , ಫಕೀರಪ್ಪ ಕಟ್ಟಿಮನಿ, ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣ ಕುಡಿಯೋ ನೀರು ವಿಭಾಗದ ಇಂಜಿನೀಯರ್ ಗಳು, ವಿಷಯ ನಿರ್ವಾಹಕರು ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.