ಗುದ್ನೇಶ್ವರ ಮಠದ ಜಮೀನು ವಿವಾದಕ್ಕೆ ಟ್ವಿಸ್ಟ್ .
ಸೇವಾದಾರರ ಜಮೀನು ಪಟ್ಟಾಗೆ ಜಿಲ್ಲಾಧಿಕಾರಿಗೆ ಶಾಸಕರ ಪತ್ರ..!!
ಕುಕನೂರು : ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಸ್ಪಂದಿಸಿರುವ ಶಾಸಕ ಬಸವರಾಜ್ ರಾಯರಡ್ಡಿ ಅವರು ಗುದ್ನೇಶ್ವರ ದೇವಸ್ಥಾನ ಕ್ಕೆ ಸಂಬಂದಿಸಿದ ಸರ್ವೆ ನಂಬರ್ 78 ಜಮೀನು ವಿವಾದಕ್ಕೆ ಸಂಬಂಧಿಸಿದ್ದಂತೆ ಶಾಸಕ ಬಸವರಾಜ್ ರಾಯರಡ್ಡಿ ರಂಗಪ್ರವೇಶ ಮಾಡಿದ್ದು ಗ್ರಾಮಸ್ಥರ ಮನವಿಯಂತೆ ಜಮೀನನ್ನು 18 ಜನ ಸೇವಾದಾರರಿಗೆ ಪಟ್ಟಾ ಮಾಡಿಕೊಡಲು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಗುದ್ನೇಶ್ವರ ಮಠದ ಸೇವಾದಾರರಿಗೆ ಸೇರಿದ ಜಮೀನಿನಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಅಲ್ಲದೇ ಶಾಸಕ ರಾಯರಡ್ಡಿ ಅವರು ಪರೋಕ್ಷವಾಗಿ ಜಮೀನು ಕಬಳಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಇದೆಲ್ಲಾ ಬೆಳವಣಿಗೆಯನ್ನು ಗಮನಿಸಿರುವ ಶಾಸಕ ರಾಯರಡ್ಡಿ ಅವರು ಈಗ ಖುದ್ದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸರ್ವೆ ನಂಬರ್ 78 ರಲ್ಲಿ ಬರುವ 40 ಎಕರೆ ಜಮೀನನ್ನು 18 ಜನ ಸೇವಾದಾರರಿಗೆ ಹಂಚಿಕೆ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.
ಆದರೆ ಇದೊಂದು ಕಣ್ಣೊರೆಸುವ ತಂತ್ರವೊ ಇಲ್ಲವೇ ಜನ ಸಾಮಾನ್ಯರ ಬಗ್ಗೆ ಶಾಸಕರಿಗೆ ಇರುವ ಕಾಳಜಿಯೋ ಎಲ್ಲ ವಿದ್ಯಾಮಾನ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.