ಕಲ್ಯಾಣ ಕರ್ನಾಟಕ ಉತ್ಸವ ದಿನ: ನಿವೇಶನ ಹಕ್ಕು ಪತ್ರ ವಿತರಣೆ
ಕೊಪ್ಪಳ : ಜಿಲ್ಲಾಡಳಿತದಿಂದ ಸೆ.17ರಂದು ಜಿಲ್ಲಾ ಕ್ರೀಡಾಂಗ21ಣದಲ್ಲಿ ನಡೆದ 77ನೇ ಕಲ್ಯಾಣ ಕರ್ನಾಟಕ ಉತ್ಸವ ದಿನದ ಸಮಾರಂಭದಲ್ಲಿ ಜಿಲ್ಲೆಯ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಯಿತು.
ಕೊಪ್ಪಳ ತಾಲ್ಲೂಕಿನ ಕಲ್ ತಾವರಗೇರಾ ಗ್ರಾಮದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 135 ನಿವೇಶನಗಳು ಮಂಜೂರಾಗಿದ್ದು, ಅದರಲ್ಲಿ ಸಾಂಕೇತಿಕವಾಗಿ ಬಸಮ್ಮ ಗಂಡ ಧ್ಯಾಮಣ್ಣ ಬಂಗಾಳಿ, ಹುಲಿಗೆಮ್ಮ ಗಂಡ ಲಕ್ಷ್ಮಣ್ಣ ಮಾಳೆಕೊಪ್ಪ, ಗಾಳೆವ್ವ ಗಂಡ ದುರುಗಪ್ಪ ಗುಡ್ಲಾನೂರ್, ಶಿವಪ್ಪ ತಂದೆ ಹುಚ್ಚಪ್ಪ ಚೌದ್ರಿ, ಮಹಾದೇವಪ್ಪ ತಂದೆ ಲಕ್ಷ್ಮಣ್ ಮಡಿವಾಳರ್, ಯಂಕಪ್ಪ ತಂದೆ ಬಸಪ್ಪ ಮರಾಠಿ ಎಂಬ 6 ಫಲಾನುಭವಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಸಾಂಕೇತಿಕವಾಗಿ ನಿವೇಶನ ಹಕ್ಕು ಪತ್ರಗಳನ್ನು ನೀಡಿದರು.
ಈ ವೇಳೆ ಸಂಸದ ಕೆ.ರಾಜಶೇಖರ ಹಿಟ್ನಾಳ್, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮತ್ತು ಹೇಮಲತಾ ನಾಯಕ, ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಎಸ್.ಎಂ. ಪಟೇಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ ಹಾಗೂ ಇನ್ನೀತರರು ಇದ್ದರು.