LOCAL NEWS : ಯುವ ನಿಧಿ ಯೋಜನೆ ವಿದ್ಯಾವಂತ ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡಬಲ್ಲದು : ಸಂಗಮೇಶ ಗುತ್ತಿ
ಕುಕನೂರು : “ಯುವ ನಿಧಿ ಕಾರ್ಯಕ್ರಮವು ವಿದ್ಯಾವಂತ ನಿರುದ್ಯೋಗಿಗಳಿಗೆ ಅಲ್ಪ ಮಟ್ಟದ ಆರ್ಥಿಕ ನೆರವು ನೀಡಬಲ್ಲದು” ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಸಮಿತಿಯ ತಾಲೂಕ ಅಧ್ಯಕ್ಷ ಸಂಗಮೇಶ ಗುತ್ತಿ ಅಭಿಪ್ರಾಯಪಟ್ಟರು.
ಇಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ತಳಕಲ್ನಲ್ಲಿ ಪಂಚ್ ಗ್ಯಾರಂಟಿ ಯೋಜನೆಗಳೊಂದಾದ ಇವನಿಗೆ ಯೋಜನೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ದೇಶ ಮಾತನಾಡಿದ ಅವರು, “ಈ ಇವನಿಗೆ ಯೋಜನೆಯ ಕುರಿತು ಬಹಳಷ್ಟು ಜನರಿಗೆ ಮಾಹಿತಿ ಕೊರತೆ ಇದ್ದು, ಇದರ ಕುರಿತು ಮುಂದಿನ ದಿನಮಾನಗಳಲ್ಲಿ ಇವನಿಗೆ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿ ಕಾಲೇಜು ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು” ಎಂದರು.
ಪದವಿ ಶಿಕ್ಷಣ ಮುಗಿದ ನಂತರ ವಿದ್ಯಾವಂತ ವಿದ್ಯಾರ್ಥಿಗಳಿಗೆ “ಯುವನಿಧಿ” ಯೋಜನೆ ಸಹಕಾರಿ ಆಗಲಿದ್ದು, ಈ ಕಾರ್ಯಕ್ರಮವನ್ನು ಫೈನಲ್ ಇಯರ್ಸ್ ವಿದ್ಯಾರ್ಥಿಗಳು ಹಾಗೂ 2023ರ ಈಚೆಗೆ ಪದವಿ ಪಾಸಾದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಯುವ ನಿಧಿ ಅನುಷ್ಠಾನ ಅಧಿಕಾರಿ ಶಿವಯೋಗಿ ಹೊಸಳ್ಳಿ ಅವರು ಮಾತನಾಡಿದ ಅವರು ಯುವ ನಿಧಿ ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಸಮಿತಿಯ ತಾಲೂಕ ಅಧ್ಯಕ್ಷ ಸುಧೀರ್ ಕೋರ್ಲಹಳ್ಳಿ, ಯಲಬುರ್ಗಾ-ಕುಕನೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್ ಬೀರಾದಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಸಮಿತಿಯ ಸದಸ್ಯ ಮಲ್ಲಿಕಾರ್ಜುನ್ ಜಕ್ಲಿ, ಗ್ರಾಮ ಪಂಚಾಯಿತ ಅಧ್ಯಕ್ಷ ಜಾಹೀರಾಬಾನು ಬೇಗಂ, ಮಹೇಶ್ ಯರಾಶಿ, ಕೃಷಿವಿಶ್ವವಿದ್ಯಾನಿಲಯದ ಸಿಂಡೀಕೆಟ್ ಸದಸ್ಯ ತಿಮ್ಮಣ್ಣ ಚೌಡಿ ಹಾಗೂ ತಳಕಲ್ ಪಿಡಿಒ ವೀರನಗೌಡ ಹಾಗೂ ಸದಸ್ಯರು, ವಿದ್ಯಾರ್ಥಿಗಳು ಇದ್ದರು.