You are currently viewing LOCAL NEWS : ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದೇ ಬಸವರಾಜ ರಾಯರೆಡ್ಡಿಯವರು : ಸಂಗಮೇಶ ಗುತ್ತಿ 

LOCAL NEWS : ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದೇ ಬಸವರಾಜ ರಾಯರೆಡ್ಡಿಯವರು : ಸಂಗಮೇಶ ಗುತ್ತಿ 

LOCAL NEWS : ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದೇ ಬಸವರಾಜ ರಾಯರೆಡ್ಡಿಯವರು : ಸಂಗಮೇಶ ಗುತ್ತಿ 

 ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು : ಬಸವರಾಜ ರಾಯರೆಡ್ಡಿ ಅವರ ದೂರ ದೃಷ್ಟಿಯ ಕಾರ್ಯವೈಕರಿಯಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಆಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕುಕನೂರು ತಾಲೂಕ ಅಧ್ಯಕ್ಷ ಸಂಗಮೇಶ್ ಗುತ್ತಿ ಅಭಿಪ್ರಾಯ ಪಟ್ಟರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಎರಡುವರೆ ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವೇ ಜರುಗಿದ್ದು, ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ 2025-26ನೇ ಸಾಲಿಗೆ 11 ಕರ್ನಾಟಕ ಪಬ್ಲಿಕ್ ಶಾಲೆ ಮಂಜುರಾಗಿರುವುದು, ಇದಕ್ಕೆ ಅಭಿವೃದ್ಧಿಪರ ಕೆಲಸಗಳಿಗೆ ಕೈಗನ್ನಡಿಯಾಗಿದೆ ಎಂದರು.

ಕುಕನೂರು ಮತ್ತು ಯಲಬುರ್ಗಾ ತಾಲೂಕುಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ಎರಡು ಕೆಪಿಎಸ್ ಶಾಲೆ ಮಂಜೂರಾಗಿದ್ದು, ಅವುಗಳ ನಂತರ ಇದೀಗ 11 ನೂತನ ಕೆಪಿಎಸ್ ಮಾದರಿ ಶಾಲೆಗೆ ಅನುಮೋದನೆ ದೊರೆತಿದೆ. ಜೊತೆಗೆ ಇದೆ ಅವಧಿಯಲ್ಲಿ 18 ಪ್ರೌಢಶಾಲೆ ಮತ್ತು 7 ಪದವಿ ಪೂರ್ವ ವಿದ್ಯಾಲಯಗಳನ್ನು ಮಂಜೂರ ಮಾಡಿಸಿ ಕ್ಷೇತ್ರದ ಬಡ ವಿದ್ಯಾರ್ಥಿಗಳ ಪಾಲಿಗೆ ಶೈಕ್ಷಣಿಕ ವರದಾನವಾಗಿದೆ ಎಂದು ಹೇಳಿದರು.

ರಾಜ್ಯಾದ್ಯಂತ ಒಟ್ಟು 900 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಸಿಂಹ ಪಾಲು ದೊರೆತಿದೆ. ಅವಳಿ ತಾಲೂಕಿಗೆ ಬರೋಬ್ಬರಿ 11 ನೂತನ ಕೆಪಿಎಸ್ ಶಾಲೆಗಳು ಇದೇ ವರ್ಷದಿಂದ ಕಾರ್ಯರಂಭಗೊಳ್ಳಲಿದೆ.

ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಶಾಲೆಯ ಸುರ್ಸಜಿತ ಕಟ್ಟಡ ನಿರ್ಮಾಣಕ್ಕಾಗಿ ಪ್ರತಿ ಶಾಲೆಗೆ 4 ಕೋಟಿ ರೂ. ಅನುದಾನ ನೀಡಲಾಗಿದೆ. ಶಾಲೆಗಳು ದ್ವಿ ಭಾಷ ನೀತಿಯಲ್ಲಿ ಪಠ್ಯಗಳು ಇರಲಿದ್ದು, ಪೂರ್ವ ಪ್ರಾಥಮಿಕ ಶಾಲೆಯಿಂದ ಪದವಿ ಪೂರ್ವ ವಿದ್ಯಾಲಯಗಳವರೆಗೆ ವ್ಯಾಸಂಗವನ್ನು ಒಳಗೊಂಡಿರುತ್ತದೆ. ಕೆಕೆಆರ್‌ಡಿಬಿಯಿಂದ 8 ಶಾಲೆಗಳು ಹಾಗೂ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅನುದಾನದಲ್ಲಿ ಮೂರು ಶಾಲೆಗಳು ಪ್ರಾರಂಭಗೊಳ್ಳಲಿದ್ದು, ಕುಕನೂರು ತಾಲೂಕಿಗೆ 6 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 7 ಶಾಲೆಗಳು ಕಾರ್ಯನಿರ್ವಹಿಸಲಿವೆ ಎಂದರು.

ಎಲ್ಲಾ ಮೂಲಭೂತ ಸೌಲಭ್ಯದೊಂದಿಗೆ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಂತೆ ಬಸ್ ಸೌಲಭ್ಯಗಳನ್ನು ಕೂಡ ಅಳವಡಿಸಲಾಗುವುದು. ಉಳ್ಳವರು ಮಾತ್ರ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯುವುದನ್ನು ಮನಗಂಡ ರಾಜ್ಯ ಸರ್ಕಾರ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ಬಡ ವಿದ್ಯಾರ್ಥಿಗಳು ಸಹ ಖಾಸಗಿ ವಿದ್ಯಾರ್ಥಿಗಳೊಂದಿಗೆ ಪೈಪೋಟಿಯಾಗಿ ಶಿಕ್ಷಣ ಪಡೆಯಲಿ ಎಂಬ ಮುಂದಾಲೋಚನೆಯನ್ನು ಸರಕಾರ ಹೊಂದಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರ ಪಾತ್ರ ಬಹಳಷ್ಟು ಮಹತ್ವ ಪಡೆದಿಕೊಂಡಿದೆ ಎಂದರು.

ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಶೈಕ್ಷಣಿಕ ಹಿತದೃಷ್ಟಿಯಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯಕಾರಿಯಾಗಲೆಂದೆ ಶಿಕ್ಷಣ ಕ್ಷೇತ್ರಕ್ಕೆ ಶಾಸಕ ಬಸವರಾಜ ರಾಯರೆಡ್ಡಿ ಅವರು ಯಾವುದೇ ಫಲಾಫೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕುಕನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ಕುಕನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಮಾತನಾಡಿ, ‘ರಾಯರೆಡ್ಡಿ ಅವರಿಗೆ ಶಿಕ್ಷಣದ ಜೊತೆಗೆ ಕ್ಷೇತ್ರದ ಜನಪರ ಕಾಳಜಿ ಇದೆ. ಆದ್ದರಿಂದ ಇಂತಹ ಶಿಕ್ಷಣ ಕ್ರಾಂತಿ ನಿರ್ಮಾಣವಾಗಲು ಸಾಧ್ಯವಾಗಿದೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರವು “ಶಿಕ್ಷಣ ಕಾಶಿ” ಎಂದು ಹೇಳುವುದು ಅತಿಶವ್ಯಕ್ತಿ ಆಗುವುದಿಲ್ಲ, ಏಕೆಂದರೇ ಸರ್ಕಾರಿ ಹೊಡೆತನದಲ್ಲಿರುವ ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತುಕೋತರ ಪದವಿವರೆಗೆ ಈ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಹೊಂದಿವೆ. ಹಾಗಾಗಿ ಇದು ಶೈಕ್ಷಣಿಕ “ಶಿಕ್ಷಣ ಕಾಶಿ” ಎಂದೇ ಕರೆಯಬಹುದು ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನ ಪ್ರಮುಖ ಮುಖಂಡರಾದ ರೆಹಮಾನ್ ಸಾಬ್ ಮಕಪ್ಪನವರ್, ಪಟ್ಟಣ ಪಂಚಾಯತ್ ಸದಸ್ಯ ಗಗನ ನೋಟಗಾರ, ತಾಲೂಕ ಕಾಂಗ್ರೆಸ್ ವಕ್ತಾರರಾದ ಯಮನೂರಪ್ಪ ಕಟ್ಟಿಮನಿ, ಮುತ್ತು ವಾಲ್ಮೀಕಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಕಾರ್ತಿಕ್ ಜಾದವ್ ಉಪಸ್ಥಿತರಿದ್ದರು.

Leave a Reply

error: Content is protected !!