BIG NEWS : ಭಾರತದಲ್ಲಿ ವಾಟ್ಸಾಪ್‌ಗೆ ನಿರ್ಬಂಧ..! : 59ಸಾವಿರಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿರ್ಬಂಧಿಸಿದ ಐ4ಸಿ..!
ನವದೆಹಲಿ : ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಡಿಜಿಟಲ್ ವಂಚನೆಯನ್ನು ಎದುರಿಸಲು ಮತ್ತು ಸೈಬರ್ ಅಪರಾಧಗಳಿಂದ ನಾಗರಿಕರನ್ನು ರಕ್ಷಿಸಲು ಮಹತ್ವದ ಕ್ರಮಗಳನ್ನು ಇಲಾಖೆಯೂ ಕೈಗೊಂಡಿದೆ.
ಇಂದು ಲೋಕಸಭೆಯಲ್ಲಿ ಪ್ರಾಸ್ತಾಪವಾಗಿರುವ ಪ್ರಕಾರ, ‘ಡಿಜಿಟಲ್ ವಂಚನೆಗಾಗಿ ಬಳಸಲಾಗುತ್ತಿದ್ದ 1,700 ಕ್ಕೂ ಹೆಚ್ಚು ಸ್ಕೈಪ್ ಐಡಿಗಳು ಮತ್ತು 59ಸಾವಿರಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು (ಐ 4 ಸಿ) ನಿರ್ಬಂಧಿಸಿದೆ.
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು, ಸೈಬರ್ ಅಪರಾಧಗಳ ಸಮನ್ವಯ ಕೇಂದ್ರ (ಐ 4 ಸಿ) ಅಡಿಯಲ್ಲಿ 2021 ರಲ್ಲಿ ಪ್ರಾರಂಭಿಸಲಾದ ‘ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್ಮೆಂಟ್ ಸಿಸ್ಟಮ್’ ನ ಮಹತ್ವವನ್ನು ತಿಳಿಸಿದರು.