FLASH NEWS : ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಕೊಪ್ಪಳದಲ್ಲಿಯೇ ಪ್ರವೇಶ..!

You are currently viewing FLASH NEWS : ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಕೊಪ್ಪಳದಲ್ಲಿಯೇ ಪ್ರವೇಶ..!

FLASH NEWS : ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಕೊಪ್ಪಳದಲ್ಲಿಯೇ ಪ್ರವೇಶ..!

ಕೊಪ್ಪಳ : 2025-26ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಿಗೆ ಕೊಪ್ಪಳ ಪ್ರಾದೇಶಿಕ ಕಚೇರಿಯಲ್ಲೇ ಪ್ರವೇಶಾತಿ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಛೇರಿಯ ನಿರ್ಧೆಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಪ್ರದಾಯಿಕವಾಗಿ ಕಾಲೇಜಿಗೆ ತೆರಳದೇ ಮನೆಯಲ್ಲೇ ಕುಳಿತುಕೊಂಡು, ಯಾವುದೇ ಸರ್ಕಾರಿ ಅರೆಸರ್ಕಾರಿ ಇಲಾಖೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಾ ದೂರ ಶಿಕ್ಷಣದ ವ್ಯವಸ್ಥೆಯಡಿ ಶಿಕ್ಷಣ ಪಡೆಯಲು ಈ ಭಾಗದ ಆಸಕ್ತ ವಿದ್ಯಾರ್ಥಿ ಮತ್ತು ಪೋಷಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತನ್ನದೇ ಆದ ಪ್ರಾದೇಶಿಕ ಕೇಂದ್ರವನ್ನು ನೂತನವಾಗಿ ಕೊಪ್ಪಳದಲ್ಲಿ ಪ್ರಾರಂಭಿಸಿದ್ದು, ಈಗಾಗಲೇ 2025-26ನೇ ಶೈಕ್ಷಣಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿಯು ಪ್ರಾರಂಭವಾಗಿದೆ.

ಅದರಂತೆ ವಿಶ್ವವಿದ್ಯಾನಿಲಯದ ನಿಯಮಗಳಿಗನೂಗುಣವಾಗಿ ಸ್ಥಳದಲ್ಲಿಯೇ ದಾಖಲಾತಿಗಳನ್ನು ಪಡೆದು ಪ್ರವೇಶಾತಿ ನೀಡುವ ಕುರಿತು ಶಿಕ್ಷಣವನ್ನು ಪಡೆಯಲು ಅವಕಾಶವಿದ್ದು, ಪ್ರವೇಶಾತಿಯನ್ನು ಹೊಂದಲು ದಿನಾಂಕ:15.08.2025 ರಂದು ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಗಳು ನಿಗದಿತ ದಿನಾಂಕದ ಒಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಹಾಕಿಕೊಂಡು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ, ಕಾರ್ಯಾಲಯದ ಕಟ್ಟಡದ ಮೊದಲನೇ ಮಹಡಿ, ಗೋವನಕೊಪ್ಪ ಆಸ್ಪತ್ರೆ ಎದುರಿಗೆ, ಹೊಸಪೇಟೆ ರಸ್ತೆ ಬಳಿ ಇರುವ ಪ್ರಾದೇಶಿಕ ಕೇಂದ್ರ ಕಚೇರಿಗೆ ಭೇಟಿ ನೀಡಿ, ನಿಗದಿತ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ, ಅಗತ್ಯ ದಾಖಲಾತಿಗಳ ನಕಲು ಪ್ರತಿಗಳನ್ನು ಕಛೇರಿಯಲ್ಲಿ ಸಲ್ಲಿಸಿ ಪ್ರವೇಶಾತಿಯನ್ನು ಪಡೆದುಕೊಳ್ಳಲು ಪ್ರಾದೇಶಿಕ ನಿರ್ದೇಶಕರಾದ ಸಂದೇಶ್ ಕೆ.ಎಸ್‌ ಅವರು ಪ್ರಕಟಣೆಯ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8904405994 8748845520, 8748845520, 7795066485, 8904405994, 9071179986, 7483607715 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ಕೊಳ್ಳಬಹುದಾಗಿದೆ.

Leave a Reply

error: Content is protected !!