LOCAL NEWS : ಸಾವಯವ ಕೃಷಿ ಪದ್ದತಿಗೆ ರೈತರು ಒತ್ತುನೀಡಿ : ಸಂಸದ ರಾಜಶೇಖರ ಹಿಟ್ನಾಳ

You are currently viewing LOCAL NEWS : ಸಾವಯವ ಕೃಷಿ ಪದ್ದತಿಗೆ ರೈತರು ಒತ್ತುನೀಡಿ : ಸಂಸದ ರಾಜಶೇಖರ ಹಿಟ್ನಾಳ

LOCAL NEWS : ಸಾವಯವ ಕೃಷಿ ಪದ್ದತಿಗೆ ರೈತರು ಒತ್ತುನೀಡಿ : ಸಂಸದ ರಾಜಶೇಖರ ಹಿಟ್ನಾಳ

ಹಳ್ಳಿಗಳ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಉತ್ತರ ಮಂಗಳೂರು ಹೊಬಳಿ ಗ್ರಾಮಗಳ ಜನಪ್ರತಿನಿಧಿಗಳಿಂದ ಗ್ರಾಮಗಳ ಸಮಸ್ಯೆಗಳ ಚರ್ಚೆ

ಕುಕನೂರ : ‘ಕೃಷಿ ಇಲಾಖೆ ಅಡಿಯಲ್ಲಿ ಗೊಬ್ಬರ ವಿತರಣೆ ನಿಖರ ಬೆಲೆಯಲ್ಲಿ ಮಾರಾಟ ಮಾಡಬೇಕು,ತೋಟಗಾರಿಕೆ ಯೋಜನೆಯಡಿ ಸಾವಯವ ಕೃಷಿ ಮೂಲಕ ವ್ಯವಸಾಯ ಮಾಡಬೇಕು, ನರೇಗಾ ಯೋಜನೆಯಡಿ ನೇರವಾಗಿ ಸಹಾಯಧನ ಒದಗಿಸುತ್ತಿದ್ದು, ಅದನ್ನು ಬಳಕೆ ಮಾಡಿಕೊಳಿ’ ಎಂದು ಸಂಸದ ಕೆ ರಾಜಶೇಖರ ಹಿಟ್ನಾಳ ಹೇಳಿದರು.

ತಾಲೂಕಿನ ಮಂಗಳೂರು ಹೊಬಳಿ ಗ್ರಾಮ ಪಂಚಾಯತಿ ಗಳ ವಾರು ದಿಶಾ ಸಭೆಯನ್ನು ಸಂಸದ ಕೆ ರಾಜಶೇಖರ ಹಿಟ್ನಾಳರವರ ಅಧ್ಯಕ್ಷತೆಯಲ್ಲಿ ಮಂಗಳೂರು ಗ್ರಾಮದ ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳೋಂದಿಗೆ ಮಾನ್ಯ ಲೋಕಸಭಾ ಸದಸ್ಯರು ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕಾದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎಂದರು.

ರಾಷ್ಟ್ರೀಯ ತೋಟಗಾರಿಕೆ ಯೋಜನೆಯಡಿ ಹನಿನೀರಾವರಿಗಾಗಿ 90% ಸಹಾಯಧನ ಇದ್ದು ತೋಟಗಾರಿಕೆ ರೈತರು ಅದರ ಸದುಪಯೋಗ ಪಡಿಸಿಕೊಳ್ಳಬೇಕು. NREGA ಯೋಜನೆಯಡಿ ರಸ್ತೆ ಕಾಮಗಾರಿಗಳನ್ನು ಆಧ್ಯತೆ ಮೇರೆಗೆ ಮಾಡಿಕೊಡಲು ಹೇಳಿದರು. ಜನ ಸಾಮಾನ್ಯರಿಗೆ ಎಲ್ಲಾ ಕಾಮಗಾರಿಗಳಿಗೆ ಮಾಹಿತಿ ತಿಳಿದುಕೊಳ್ಳಲು ದತ್ತು ಗ್ರಾಮದ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.

ಸ್ಥಳದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್ ಪಾಟೀಲ್, ತಹಶೀಲ್ದಾರ,RWS AEE ಅನುಷ್ಠಾನ ಇಲಾಖೆ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಹಾಜರಿದ್ದರು.

Leave a Reply

error: Content is protected !!