FLASH NEWS : ಸಾರಿಗೆ ನೌಕರರ ಪ್ರಮುಖ ಬೇಡಿಕೆ ಸರ್ಕಾರ ಈಡೇರಿಸಲಿ : ವಿಜಯ್ ಭಾಸ್ಕರ್

You are currently viewing FLASH NEWS : ಸಾರಿಗೆ ನೌಕರರ ಪ್ರಮುಖ ಬೇಡಿಕೆ ಸರ್ಕಾರ ಈಡೇರಿಸಲಿ : ವಿಜಯ್ ಭಾಸ್ಕರ್

ಸಾರಿಗೆ ನೌಕರರ ಪ್ರಮುಖ ಬೇಡಿಕೆ ಸರ್ಕಾರ ಈಡೇರಿಸಲಿ : ವಿಜಯ್ ಭಾಸ್ಕರ್

ಕೊಪ್ಪಳ : ಕೆ ಎಸ್ ಆರ್ ಟಿ ಸಿ ಸ್ಟಾಫ್ ಮತ್ತು ವರ್ಕರ್ಸ್ ಗಳ ಕೊಪ್ಪಳ ವಿಭಾಗದ 8 ನೇ ಸಮ್ಮೇಳನ ನಗರದ ಶಾದಿ ಮಹಲ್ ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್, ಸರ್ಕಾರವು ಸಾರಿಗೆ ನೌಕರರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು, ಮುಖ್ಯವಾಗಿ 2020 ರಿಂದ ಪರಿಷ್ಕರಣೆಯಾದ 38 ತಿಂಗಳ ವೇತನದ ಬಾಕಿ ಹಣ ಬಿಡುಗಡೆ ಮಾಡಬೇಕು, ಪ್ರಸಕ್ತ ಸಾಲಿನಿಂದ ಸಾರಿಗೆ ನೌಕರರ ವೇತನ ಪರಿಸ್ಕರಣೆ ಆಗಬೇಕು, ನೌಕರರಿಗೆ ಸೂಕ್ತ ಅರೋಗ್ಯ, ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು, ನಮ್ಮ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಮಟ್ಟದ ಹೋರಾಟ ಹಮ್ಮಿಕೊಂಡಿದ್ದೇವೆ.

ಕೊಪ್ಪಳ ವಿಭಾಗದಲ್ಲಿಯ ತಾಂತ್ರಿಕ ಸಿಬಂದಿ, ಕಚೇರಿ ಸಿಬ್ಬಂದಿಗಳು ಸೇರಿದಂತೆ ನೌಕರರು ಕೂಡಾ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ವಿಭಾಗಿಯ ವ್ಯವಸ್ಥಾಪಕರು ನೌಕರರ ಸಮಸ್ಯೆ ಆಲಿಸಲು, ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ, ಹೀಗಾಗಿ ಸ್ಥಳೀಯ ಮತ್ತು ರಾಜ್ಯ ಮಟ್ಟದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಕೆ ಎಸ್ ಆರ್ ಟಿ ಸಿ ಯೂನಿಯನ್ ನಿಂದ 8 ನೇ ಸಮ್ಮೇಳನದ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ ಎಂದು ವಿಜಯ್ ಭಾಸ್ಕರ್ ಹೇಳಿದರು.

ಈ ಸಂದರ್ಭದಲ್ಲಿ ಸಿದ್ದಪ್ಪ ಪಲ್ಕಿ, ಯು ಎಸ್ ಸೊಪ್ಪಿಮಠ, ಆರ್ ಎಫ್ ಕವಳಿಕಾಯಿ, ಎಫ್ ಎಸ್ ಪವಾಡ ಶೆಟ್ಟರ್, ಗವಿಸಿದ್ದಪ್ಪ ಕಂಳ್ಯಾಳ್, ಸತೀಶ್ ಮುಟಗಿ, ಎ ಜಿ ಮಣ್ಣೂರ್, ಸಿಬ್ಬಂದಿಗಳು, ಸಾರಿಗೆ ಇಲಾಖೆಯ ನೌಕರರರು ಉಪಸ್ಥಿತರಿದ್ದರು.

Leave a Reply

error: Content is protected !!