ಭಾರತೀಯ ಸಂಸ್ಕೃತಿ ಸಂಪ್ರದಾಯದಂತೆ ಹಬ್ಬವನ್ನು ಆಚರಿಸಿ ! ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ: ಎಸ್ ಪಿ ನೇಮಗೌಡರ್

ಭಾರತೀಯ ಸಂಸ್ಕೃತಿ ಸಂಪ್ರದಾಯದಂತೆ ಹಬ್ಬವನ್ನು ಆಚರಿಸಿ ! ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ: ಎಸ್ ಪಿ

ಲಕ್ಷ್ಮೇಶ್ವರ : ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ಯ ಲಕ್ಷ್ಮೇಶ್ವರ ತಾಲೂಕ್ ಪಂಚಾಯತಿ ಸಭಾಭವನದಲ್ಲಿ ಶಾಂತಿ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ ಎಸ್ ನೇಮಗೌಡರ ವಹಿಸಿದ್ದರು. ಪೂರ್ಣಜಿ ಕರಾಟೆ ಎಂಎಂ ಗದಗ ಸೋಮೇಶ್ ಉಪನಾಳ ಗಂಗಾಧರ ಮೆಣಸಿನಕಾಯಿ ಪುರಸಭೆ ಉಪಾಧ್ಯಕ್ಷ ಪಿರ್ದೋಷ್ ಆಡೂರ,ಮುಸ್ತಾಕ್ ಅಹಮದ್ ಶಿರಹಟ್ಟಿ, ಎಸ್ ಕೆ ಹವಾಲ್ದಾರ್, ಚಂಬಣ್ಣ ಬಾಳಿ ಕಾಯಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ, ಸಹೋದರತೆಯಿಂದ ಸಮಾಜದಲ್ಲಿ ಯಾವುದೇ ರೀತಿಯ ಭಂಗಬಾರದಂತೆ ಡಿಜೆ ನಿಷೇಧ ಮಾಡಿ ನಾಡಿನ ಹೆಸರಾಂತ ಕಲಾವಿದರನ್ನು ಬಳಸಿಕೊಂಡು ಹಬ್ಬವನ್ನು ಆಚರಿಸೋಣ ಎಂದರು. ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ ಎಸ್ ನೇಮಗೌಡ ರವರು ಮಾತನಾಡಿ, ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸಮಾಜದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಣೆ ಮಾಡಲು ಮುಂದಾಗಿರಿ. ಗಣೇಶ ಮೂರ್ತಿಗಳ ಎತ್ತರ ಮಿಥಗೊಳಿಸಿ ಆದಷ್ಟು ಹಗಲು ಸಮಯದಲ್ಲಿ ವಿಸರ್ಜನೆ ಕಾರ್ಯ ಹಮ್ಮಿಕೊಂಡರೆ ಸೂಕ್ತ. ಡಿಜೆ ಬಳಸಬೇಕೋ, ಬೇಡವೋ ಎಂಬುದನ್ನು ತಾವೇ ನಿರ್ಧರಿಸಿಕೊಂಡು ತಿಳಿಸಬೇಕು. ಪರಿಸರ ಮಾರಕ ಪಟಾಕಿ ಹಚ್ಚಬಾರದು, ಗ್ರೀನ್ ಪಟಾಕ್ಷಿಯನ್ನು ಬಳಸಿರಿ. ಸಮಾಜದಲ್ಲಿ ಶಾಂತಿಗೆ ಭಂಗ ತರುವವರ ಮೇಲೆ ಪೊಲೀಸ್ ಇಲಾಖೆ ನಿಗಾವಹಿಸಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಗಣೇಶೋತ್ಸವ ಮತ್ತು ಈದ್ ಮಿಲಾದ ಹಬ್ಬಕ್ಕೆ ಆಯಾಯ ಪ್ರದೇಶದ ರಾಜಕೀಯ ಮುಖಂಡರು ವಾರ್ಡಿನ ಜನಪ್ರತಿನಿಧಿಗಳು ಹಿರಿಯರು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸಹಾಯ ಸಹಕಾರದಿಂದ ವಿಸರ್ಜನೆ ಕಾರ್ಯವನ್ನ ನಿಯಮ ಮೀರಿ ನಡೆದುಕೊಳ್ಳದಂತೆ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ಪತನದಲ್ಲಿ ನಡಿಯುವ ಹಬ್ಬ ಹರಿದಿನಗಳ ಆಚರಣೆಗಳ ಕುರಿತು ಬೇರೊಂದು ಕಡೆ ಹೊಗಳಿಕೆಯ ಮಾತುಗಳು ಕೇಳಿಬರುವಂತಾಗಲಿ ಎಂದರು .

ಈ ಸಂದರ್ಭದಲ್ಲಿ ದಂಡಾಧಿಕಾರಿಗಳಾದ ವಾಸುದೇವಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ ಬಿ ಸುಂಕದ, ಡಿ ವೈ ಎಸ್ ಪಿ , ಡಿ ಎಚ್ ಇನಾಂದಾರ್, ತಾಲೂಕ್ ಪಂಚಾಯತಿ ಇ ಓ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯ ಅಧಿಕಾರಿ ಮಹೇಶ್ ಹಡಪದ, ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ಈರಪ್ಪ ರಿತ್ತಿ, ಕ್ರೈಂ ಪಿಎಸ್ಐ ಎನ್ ಎಸ್ ಜೋಗದಂಡಕರ,ಕೆ ಇ ಬಿ ಅಧಿಕಾರಿ ಗುರುರಾಜ ಸೇರಿದಂತೆ ವಿವಿಧ ಇಲಾಖೆಯವರಿದ್ದರು. ಸಾರ್ವಜನಿಕರ ಪರವಾಗಿ ಮುಖಂಡರಾದ ದಾದಾಪೀರ್ ಮುಚ್ಚಾಲೆ, ಶರಣು ಗೋಡಿ, ನಾಗರಾಜ್ ಮಡಿವಾಳರ್, ಚಂಬಣ್ಣ ಬಾಳಿಕಾಯಿ, ಸುರೇಶ ನಂದೆಣ್ಣವರ, ಮಂಜುನಾಥ ಹೊಗೆಸೊಪ್ಪಿನ, ಜಾಕೀರ್ ಹುಸೇನ್ ಹವಾಲ್ದಾರ್, ಸುಲೇಮಾನ್ ಸಾಬ್ ಕಣಕೆ, ಶಿವಯೋಗಿ ಅಂಕಲಕೋಟಿ, ಮಹೇಶ್ ಕಲಘಟಗಿ, ಬಸವರಾಜ್ ಹಿರೇಮನಿ, ರಾಜಣ್ಣ ಮಡಿವಾಳರ, ಅನಿಲ್ ಮುಳಗುಂದ, ಸದಾನಂದ ನಂದೆಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!