You are currently viewing LOCAL EXPRESS : ನಾಳೆ ಕುಕನೂರು ಪಟ್ಟಣದಲ್ಲಿ ಬಂಜಾರ ಭೋವಿ, ಕೊರಮ,ಕೊರಚ ಸಮುದಾಯಗಳಿಂದ ಬೃಹತ್‌ ಪ್ರತಿಭಟನೆ ರ‍್ಯಾಲಿ..!

LOCAL EXPRESS : ನಾಳೆ ಕುಕನೂರು ಪಟ್ಟಣದಲ್ಲಿ ಬಂಜಾರ ಭೋವಿ, ಕೊರಮ,ಕೊರಚ ಸಮುದಾಯಗಳಿಂದ ಬೃಹತ್‌ ಪ್ರತಿಭಟನೆ ರ‍್ಯಾಲಿ..!

ಪ್ರಜಾ ವೀಕ್ಷಣೆ ಸುದ್ದಿ : 

LOCAL EXPRESS : ನಾಳೆ ಕುಕನೂರು ಪಟ್ಟಣದಲ್ಲಿ ಬಂಜಾರ ಭೋವಿ, ಕೊರಮ,ಕೊರಚ ಸಮುದಾಯಗಳಿಂದ ಬೃಹತ್‌ ಪ್ರತಿಭಟನೆ ರ‍್ಯಾಲಿ..!

ಕುಕನೂರು : ಬಂಜಾರ ಭೋವಿ, ಕೊರಮ ಕೊರಚ ಸಮುದಾಯಗಳಿಗೆ ಒಳ ಮೀಸಲಾತಿಯಲ್ಲಿ ಕರ್ನಾಟಕ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ಇದೇ ಸಪ್ಟೆಂಬರ್‌ 8 ರಂದು ಸೋಮವಾರ ಕೂಕನೂರು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಂಜಾರ ಸಮಾಜದ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಬೆಳಗ್ಗೆ 10 ಗಂಟೆಗೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಶಿರೂರು ವಿರಭದ್ರಪ್ಪವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಳಿಕ ಕುಕನೂರು ತಹಸೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಸದ್ಯಕ್ಕೆ ಸರ್ಕಾರ ನೀಡಿರುವ ಒಳಮೀಸಲಾತಿಯನ್ನು ಮತ್ತೋಮ್ಮೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಸರಿಪಡಿಸಲು ಒತ್ತಾಯಿಸಲಿದ್ದೇವೆ ಎಂದು ಹೇಳಿದರು.

Prajavikshane

Chandru R Bhanapaur

Leave a Reply

error: Content is protected !!