You are currently viewing KOPPAL NEWS : ಹಾಸನದಲ್ಲಿ ನಾಳೆ ಡಿ.ಎಸ್. ಎಸ್ ಸ್ವಾಭಿಮಾನಿ ಬಣ ರಾಜ್ಯಮಟ್ಟದ ವಿಚಾರ ಸಂಕಿರಣ : ಪರಶುರಾಮ ಕೆರೆಹಳ್ಳಿ

KOPPAL NEWS : ಹಾಸನದಲ್ಲಿ ನಾಳೆ ಡಿ.ಎಸ್. ಎಸ್ ಸ್ವಾಭಿಮಾನಿ ಬಣ ರಾಜ್ಯಮಟ್ಟದ ವಿಚಾರ ಸಂಕಿರಣ : ಪರಶುರಾಮ ಕೆರೆಹಳ್ಳಿ

KOPPAL NEWS : ಹಾಸನದಲ್ಲಿ ನಾಳೆ ಡಿ.ಎಸ್. ಎಸ್ ಸ್ವಾಭಿಮಾನಿ ಬಣ ರಾಜ್ಯಮಟ್ಟದ ವಿಚಾರ ಸಂಕಿರಣ : ಪರಶುರಾಮ ಕೆರೆಹಳ್ಳಿ

ಪ್ರಜಾವೀಕ್ಷಣೆ ಸುದ್ದಿ : 

ಕೊಪ್ಪಳ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣದ ವತಿಯಿಂದ ಜ. 9ರಂದು ಹಾಸನದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಪರಶುರಾಮ್ ಕೆರೆಹಳ್ಳಿ ಅವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶತಮಾನಗಳಿಂದ ಶೋಷಣೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಅಸ್ಪೃಶ್ಯರಿಗೆ ವಿದ್ಯೆ, ಸಂಪತ್ತು ಮತ್ತು ಅಧಿಕಾರವನ್ನು ನಿರಾಕರಿಸಿ ಅಮಾನುಷವಾಗಿ ನಡೆಸಿಕೊಂಡ ಮನುವಾದಿ ವ್ಯವಸ್ಥೆಗೆ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಬಲ ಹೋರಾಟ ನಡೆಸಿ ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸಿದ್ದಾರೆ ಎಂದು ಹೇಳಿದರು. ಇದರ ಪರಿಣಾಮವಾಗಿ ದಲಿತರಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆಡಳಿತದಲ್ಲಿ ಅವಕಾಶ ದೊರೆತು ಅವರು ಸಮಾಜದ ಮುಖ್ಯಧಾರೆಯತ್ತ ಬರಲು ಸಾಧ್ಯವಾಯಿತು ಎಂದರು.

ಆದರೆ ಇದನ್ನು ಸಹಿಸದ ಮನುವಾದಿಗಳು ಎಸ್‌ಸಿ/ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿ ಲಭಿಸದಂತೆ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಾ ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ ದಾಸ್ ಕೌಜಗೇರಿ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಜಾರಿಗೆ ತರಬೇಕಾದ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ನಂತರದಿಂದ ಆಡಳಿತ ನಡೆಸಿದ ಎಲ್ಲಾ ಪಕ್ಷಗಳ ಸರ್ಕಾರಗಳು ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕ.ಕ. ವಿಭಾಗೀಯ ಸಂಚಾಲಕರಾದ ಹನುಮಂತಪ್ಪ ನಾಯಕ್ ವಡ್ಡರಹಟ್ಟಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಉಳಿಸಿ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅನ್ಯಾಯಕ್ಕೆ ಒಳಗಾದ ದಲಿತರಿಗೆ ನ್ಯಾಯ ದೊರಕಿಸಬೇಕಿದೆ. ಸಂಘಟನೆಯನ್ನು ಬಲಪಡಿಸುವ ಮೂಲಕ ಹೋರಾಟವನ್ನು ಮುಂದುವರಿಸಬೇಕು ಎಂದು ಹೇಳಿದರು.

ಮಾರುತಿ ಪೂಜಾರ್ ಬಿಕ್ಕನಹಳ್ಳಿ ಮಾತನಾಡಿ, ಎಸ್‌ಸಿ, ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಯುವಕರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಣ–ಸಂಘಟನೆ–ಹೋರಾಟವನ್ನು ಜೀವನದ ಭಾಗವಾಗಿಸಿಕೊಂಡು ನಿರುದ್ಯೋಗ ನಿವಾರಣೆ ಹಾಗೂ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಲು ಸಂಘಟನೆಯ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳು ಮತ್ತು ರಾಜ್ಯ ಸಮಿತಿ ಸದಸ್ಯರು ಭಾಗವಹಿಸುವ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಜನವರಿ 9ರಂದು ಹಾಸನದಲ್ಲಿ ಆಯೋಜಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಹನುಮಂತಪ್ಪ ನಾಯಕ (ಗಂಗಾವತಿ) ಕ.ಕ. ವಿಭಾಗೀಯ ಸಂಚಾಲಕರು, ನೂರ ಅಹ್ಮದ್ ಸಂತ್ರಾಸ್, ಅಹ್ಮದ್ ಮೇಸ್ತ್ರಿ (ಕನಕಗಿರಿ), ಅಂದಪ್ಪ ಅಡಪದ್, ಸಂಜಯ ದಾಸ್ ಕೌಜಗೇರಿ, ನಾಗರಾಜ್ ಹೊನ್ನಕೇರಿ, ಲಲಿತಾ ಮಜ್ಗಿ, ಗಾಳೇಶ ದೇವರಮನಿ, ಮಾರುತಿ ಪೂಜಾರ್, ರಾಮಲಿಂಗ ಶಾಸ್ತ್ರೀ, ಗಾಯತ್ರಿ ಸಿದ್ದಪ್ಪ ಹೊಸಮನಿ, ಗವಿಸಿದ್ದಪ್ಪ ಬೇದವಟ್ಟಿ, ಪರಸಪ್ಪ ಕಲಕೇರಿ, ಮಹೇಶ್ ಮಠದ, ಕನಕಪ್ಪ ವನಬಳ್ಳಾರಿ, ಗವಿ ಪೂಜಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

error: Content is protected !!