BREAKING : ಅಕ್ರಮ ಮರಳು ದಂಧೆ: 6 ವೀಲ್ ಟಿಪ್ಪರ್ ಸೀಜ್ ಮಾಡಿದ ಪೊಲೀಸರು..!

You are currently viewing BREAKING : ಅಕ್ರಮ ಮರಳು ದಂಧೆ: 6 ವೀಲ್ ಟಿಪ್ಪರ್ ಸೀಜ್ ಮಾಡಿದ ಪೊಲೀಸರು..!

ಪ್ರಜಾ ವೀಕ್ಷಣೆ ಸುದ್ದಿಜಾಲ :-

BREAKING : ಅಕ್ರಮ ಮರಳು ದಂಧೆ : 6 ವೀಲ್ ಟಿಪ್ಪರ್ ಸೀಜ್ ಮಾಡಿದ ಪೊಲೀಸರು..!


ಲಕ್ಷ್ಮೇಶ್ವರ : ಜಿಲ್ಲೆಯಲ್ಲಿ ಅಕ್ರಮವಾಗಿ, ರಾಜಾರೋಸವಾಗಿ ಮರಳು ದಂಧೆ ಮಾಡಲಾಗುತ್ತಿದ್ದು, ಗದಗ ಜಿಲ್ಲೆಗೆ ಅಕ್ಕಪಕ್ಕದ ಜಿಲ್ಲೆಯಿಂದ ಟಿಪ್ಪರ್ ಹಾಗೂ ಟ್ಯಾಕ್ಟರ್‌ಗಳಿಂದ ಮರಳು ದಂಧೆ ಎಗ್ಗಿಲ್ಲದೆ ಸಾಗುತ್ತಿದೆ.

ಇದಕ್ಕೆ ಉದಾಹರಣೆಯಂತೆ ಇಂದು ಬೆಳಗ್ಗೆ ಪಾಸ್ ಇಲ್ದೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವೇಳೆಯಲ್ಲಿ ಟಿಪ್ಪರ್ ಅನ್ನು ಲಕ್ಷ್ಮೇಶ್ವರು ದಾಳಿ ಮಾಡಿ ವಶಪಡಿಸಿಕೊಂಡರು.

ಇಂದು ಬೆಳಗ್ಗೆ ಲಕ್ಷ್ಮೇಶ್ವರದ ಉಳಟ್ಟಿ ಕ್ರಾಸ್ ಬಳಿ ಟಿಪ್ಪರ್ ಸೀಜ್ ಮಾಡಲಾಗಿದೆ. ಈ ವೇಳೆಯಲ್ಲಿ ಪಾಸ್ ಪರ್ಮೆಟ್ ಇಲ್ದೆ ಅಕ್ರಮವಾಗಿ ಟಿಪ್ಪರ್ ಮೂಲಕ ಮರಳು ಸಾಗಿಸಲಾಗಿದೆ. ಪೊಲೀಸ್ ರನ್ನ ನೋಡುತ್ತಿದ್ದಂತೆ ಟಿಪ್ಪರ್ ಚಾಲಕ ವಾಹನವನ್ನು ನಿಲ್ಲಿಸಿ ಓಡಿಹೋದ ಎಂದು ತಿಳಿದು ಬಂದಿದೆ.

ಚಾಲಕ ಹಾಗೂ ಟಿಪ್ಪರ್ ಮಾಲೀಕರು ವಿರುದ್ದ ದೂರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!