ಮಕ್ಕಳ ಅಡುಗೆ ಸಾಮಗ್ರಿಗಳಿಗೆ ಕನ್ನ ಹಾಕಿದ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳು ..!!

You are currently viewing ಮಕ್ಕಳ ಅಡುಗೆ ಸಾಮಗ್ರಿಗಳಿಗೆ ಕನ್ನ ಹಾಕಿದ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳು ..!!

ಮಕ್ಕಳ ಅಡುಗೆ ಸಾಮಗ್ರಿಗಳಿಗೆ ಕನ್ನ ಹಾಕಿದ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳು ..!!

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುರುಣಿಗಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಹಾಗೂ ಗಂಡು ಮಕ್ಕಳ ಶಾಲೆಯಲ್ಲಿ ರಾಜ್ಯ ಸರಕಾರವು ಬಡ ಮಕ್ಕಳು ಹಸಿವಿನಿಂದ ಇರಬಾರದೆಂದು ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ನಡೆಸುತ್ತಿದೆ. ಆದರೆ ಶಾಲೆಯ ಶಿಕ್ಷಕರು ಸಿಬ್ಬಂದಿಗಳು ಆಹಾರ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿರುವುದು ನಾಚಿಕೆಯ ಸಂಗತಿಯಾಗಿದೆ.

ಮಕ್ಕಳ ಹೊಟ್ಟೆ ಸೇರಬೇಕಾದ ಆಹಾರ ಪದಾರ್ಥಗಳನ್ನು ಶಿಕ್ಷಕರು ಹಾಗೂ ಅಡಿಗೆಯವರು ಕಳ್ಳತನ ಮಾಡಿ ಸಾಗಿಸುತ್ತಿದ್ದಾರೆ. ಇದೇ ರೀತಿ ಹಲವಾರು ದಿನಗಳ ಇಂದಿನಿಂದ ಅಡಿಗೆಯವರ ಹಾಗೂ ಶಿಕ್ಷಕರು ಸೇರಿಕೊಂಡ ಅಕ್ಕಿ ಅಡಿಗೆ ಸಾಮಗ್ರಿ ಸಾಗಿಸುತ್ತಿರುವು ಮಾಹಿತಿ ಇದ್ದುದ್ದರಿಂದ ಅವರಿಗೆ ಕಾಯುತ್ತಿದ್ದವು. ಅಡಿಗೆ ಸಿಬ್ಬಂದಿ ಇದೇ ಸಮಯದಲ್ಲಿ ಶಾಲೆಯಿಂದ ಅಕ್ಕಿ ಹಾಗೂ ಹಾಲಿನ ಪಾಕಿಟು ತರಕಾರಿ ಇತರೆ ಸಾಮಗ್ರಿಗಳನ್ನು ಸಾಗಿಸುವ ಸಮಯದಲ್ಲಿ ಗ್ರಾಮಸ್ಥರು ಎಲ್ಲರು ಸೇರಿ ಹಿಡಿದು ಹಾಕಿದ್ದೇವೆ ಎಂದು ಗ್ರಾಮದ ನಿವಾಸಿ ರಮೇಶ್ ಹಂಗನಕಟ್ಟಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಮೇಶ.ಹಂಗನಕಟ್ಟಿ. ಬಸವರಾಜ್ ಮೇಲ್ಮರಿ. ವೀರಭದ್ರಯ್ಯ ಮಠಪತಿ. ಬಸವರಾಜ ಕಳ್ಳಿ ಹಾಳ. ಈರಣ್ಣ ಶಿರನಹಳ್ಳಿ. ಶಿವರಾಜ್ ರಾಹತರ. ಶರಣಪ್ಪ ಬಸಾಪುರ. ಮಾರುತಿ ಭಜಂತ್ರಿ. ಚಂದ್ರು ಚಿಗರಿ. ಹಾಗೂ ಊರ ಸಮಸ್ತ ಗುರುಹಿರಿಯರು.ಗ್ರಾಮದ ಯುವಕರು ಮತ್ತು ಜನರು ಪಾಲ್ಗೊಂಡಿದ್ದಾರೆ.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!