LOCAL NEWS : ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳೆಯರ ಕರಾಟೆ ಸ್ಪರ್ಧೆಗೆ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಆಯ್ಕೆ..!

You are currently viewing LOCAL NEWS : ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳೆಯರ ಕರಾಟೆ ಸ್ಪರ್ಧೆಗೆ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಆಯ್ಕೆ..!

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳೆಯರ ಕರಾಟೆ ಸ್ಪರ್ಧೆಗೆ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ನೇತ್ರಾ ಆಯ್ಕೆ..!

ಕೊಪ್ಪಳ : ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳೆಯರ ಕರಾಟೆ ಪಂದ್ಯಾಟಗಳು ದಿನಾಂಕ 06 ರಿಂದ 08ರವರೆಗೆ ಬಿ.ಎಸ್.ಅಬ್ದುಲ್ ರೆಹಮಾನ್ ವಿಶ್ವವಿದ್ಯಾಲಯ, ಭೂಪಾಲ್‌ದಲ್ಲಿ ಜರುಗಲಿದೆ.

ಸದರಿ ಪಂದ್ಯಾಟಕ್ಕೆ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಕು.ನೇತ್ರಾ ಇವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ತಂಡದ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ.

ಸದರಿ ವಿದ್ಯಾರ್ಥಿನಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಆರ್ ಮರೇಗೌಡ ಮತ್ತು ಶ್ರೀಗವಿಸಿದ್ಧೇಶ್ವರ ಟ್ರಸ್ಟಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಡಾ. ಚನ್ನಬಸವ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವಿನೋದ ಸಿ. ಮುದಿನಬಸನಗೌಡರ ಹಾಗೂ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Leave a Reply

error: Content is protected !!