ಅಂಜನಾದ್ರಿಗೆ ಬಿಜೆಪಿ ಮೀಸಲಿಟ್ಟ 100 ಕೋಟಿ ಈಗ ಬಜೆಟ್ ನಲ್ಲಿ ಘೋಷಣೆ : ನವೀನ್ ಗುಳಗಣ್ಣ ನವರ್

ಅಂಜನಾದ್ರಿಗೆ ಬಿಜೆಪಿ ಮೀಸಲಿಟ್ಟ 100 ಕೋಟಿ ಈಗ ಬಜೆಟ್ ನಲ್ಲಿ ಘೋಷಣೆ : ನವೀನ್ ಗುಳಗಣ್ಣ ನವರ್

ಕೊಪ್ಪಳ : ಹಿಂದಿನ ಬಿಜೆಪಿ ಸರ್ಕಾರ ಅಂಜನಾದ್ರಿಯ ಅಭಿವೃದ್ಧಿ ಗೆ ಮೀಸಲಿಟ್ಟ 100 ಕೋಟಿ ರೂ ಹಣವನ್ನು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಿಸಿದ್ದಾರೆ ಹೊಸದಾಗಿ ಏನೂ ಕೊಟ್ಟಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್ ಟೀಕಿಸಿದ್ದಾರೆ.

ಬಜೆಟ್ 2024 ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಬಿಡುಗಡೆ ಮಾಡದೆ, ಈ ವರ್ಷದ ಬಜೆಟ್ ನಲ್ಲಿ ಮತ್ತೆ ಘೋಷಣೆ ಮಾಡಿದ್ದಾರೆ. ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ಅನುದಾನವನ್ನು ಹಿಂದಿನ ನಮ್ಮ ಬಿಜೆಪಿ ಸರ್ಕಾರ ಮೀಸಲಿಟ್ಟಿತ್ತು ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್ ಹೇಳಿದ್ದಾರೆ.

ಇದೊಂದು ಬೋಗಸ್ ಬಜೆಟ್,ಗ್ಯಾರಂಟಿ ಯೋಜನೆಗಳಿಗೆ ಅನುಧಾನ ಹೊಂದಿಸಲು ಹೋಗಿ ಅಭಿವೃದ್ಧಿ ಹಿನ್ನಡೆ ಆಗಿದೆ, ಎಂದು ಹೇಳಿದ್ದಾರೆ.

ರಾಜ್ಯದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ,
ಕೊಪ್ಪಳ ಏತ ನೀರಾವರಿ ಯೋಜನೆಯ ಕಗ್ಗಂಟು ಬಿಡಿಸಲು ರಾಜ್ಯ ಬಜೆಟ್ ವಿಫಲವಾಗಿದೆ , ಹಾಗಾಗಿ ಜಿಲ್ಲೆಯ ರೈತರಿಗೆ ಅನ್ಯಾಯ ವಾಗಿದೆ.

ಜಿಲ್ಲೆಯಲ್ಲಿ ಕೈಗಾರಿಕೆ ಉತ್ತೇಜನ ನೀಡುವಲ್ಲಿ ಬಜೆಟ್ ವಿಫಲವಾಗಿದೆ. ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆ ಈ ಬಜೆಟ್ ನಲ್ಲಿ ನೀಡದೆ ಇರುವುದು ದುರಂತದ ಸಂಗತಿ
ಕೊಪ್ಪಳ ಜಿಲ್ಲೆಗೆ ಜನರ ನಿರೀಕ್ಷೆ ತಕ್ಕ ಹಾಗೆ ಯೋಜನೆಗಳನ್ನು ಕೊಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ನವೀನಕುಮಾರ ಈಶಣ್ಣ ಗುಳಗಣ್ಣವರ್ 2024 ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

error: Content is protected !!